ದಲಿತರು ಮಾಡಿ ಕೊಟ್ಟ ಕಬ್ಬಿನ ಹಾಲು ಕುಡಿಯಬೇಕೆ..? ಎಂದು ಪ್ರಶ್ನಿಸಿ ಕಬ್ಬಿನ ಅಂಗಡಿ ಧ್ವಂಸ, ಹಲ್ಲೆ
- ನಾಗರಾಜ್ ಹೆತ್ತೂರು
ಹಾಸನ: ದಲಿತರ ಕೈಲಿ ಕಬ್ಬಿನ ಹಾಲು ಕುಡಿಸುತ್ತೀಯಾ ಎಂದು ಜಾತಿ ನಿಂದನೆ ಮಾಡಿ ಕಬ್ಬಿನ ಗಾಡಿಯನ್ನು ಧ್ವಂಸ ಗೊಳಿಸಿ ಅಪ್ಪ, ಮಗನಿಗೆ ಹಲ್ಲೆನಡೆಸಿರುವ ಅಮಾನವೀಯ ಘಟನೆ ಅರಕಲಗೂಡು ತಾಲೂಕು, ರುದ್ರಾಪಟ್ಟಣ ಸಮೀಪ ಭಾನುವಾರ ನಡೆದಿದೆ.
ಚಂದ್ರು ಎಂಬುವರು ಗಂಗೂರು ಸರ್ಕಾರಿ ಆಸ್ಪತ್ರೆ ರಸ್ತೆ ಬದಿ ತಳ್ಳುವ ಗಾಡಿಯ ಕಬ್ಬಿನ ಹಾಲಿನ ಅಂಗಡಿ ಹಾಕಿಕೊಂಡು ಕಳೆದ ಒಂದೂವರೆ ವರ್ಷದಿಂದ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಈ ಮದ್ಯೆ ರಸ್ತೆ ಬದಿ ತೋಟದ ಮಾಲೀಕ ರಾಜೇಶ್ ಮತ್ತು ಸುನೀಲ್ ಎಂಬುವರು ಇದು ನಮ್ಮ ಪಕ್ಕದ ತೋಟದಲ್ಲಿದೆ ನಾನು ಎಳನೀರು ಹಾಕುತ್ತೇನೆ. ಬೇರೆ ಕಡೆ ಹಾಕಿಕೋ ಎಂದು ಹೇಳಿದ್ದಕ್ಕೆ ಸ್ವಲ್ಪ ದೂರದಲ್ಲಿ ಗಾಡಿ ಹಾಕಿದ್ದಾರೆ.
ಆದರೆ ಮರುದಿನ ಮತ್ತೊಬ್ಬ ಮುಸ್ಲಿಂ ನನ್ನು ಕರೆತಂದ ಸುನೀಲ್ ಬೇರೊಂದು ಕಬ್ಬಿನ ಗಾಡಿ ಹಾಕಿಸಿದ್ದಾರೆ. ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದಾಗ ‘ ನಾವೆಲ್ಲಾ ನೀವು ಮಾಡಿದ ಕಬ್ಬಿನ ಹಾಲು ಕುಡಿಯಬೇಕಾ’ ಎಂದು ಹೇಳಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದರು ಎಂದು ಚಂದ್ರು ತಿಳಿಸಿದ್ದಾರೆ ಎಂದು ‘ಭೀಮ ವಿಜಯ’ ವರದಿ ಮಾಡಿದೆ.
ಅಲ್ಲದೇ ಕೂಡಲೇ ಕಬ್ಬಿನ ಗಾಡಿ ತೆಗೆಯಬೇಕೆಂದು ಬೆದರಿಸಿದ ನಾಲ್ಕೈದು ಜನರ ತಂಡ ಕಬ್ಬನ್ನು ಎಸೆದು ಗಾಡಿಯನ್ನು ಧ್ವಂಸಗೊಳಿಸಿದೆ. ವಿಚಾರ ತಿಳಿದ ಸ್ಥಳೀಯ ಸಂಘಟನೆಗಳು ಅಪ್ಪ ಮಗನನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ದೂರು ನೀಡಲಾಗುತ್ತಿದೆ ಎಂದು ಸಂತ್ರಸ್ತ ಚಂದ್ರು ಆತನ ಮಗ ಹಾಗೂ ದಲಿತ ಮುಖಂಡ ವಿನೋದ್ ಅಂಬೇಡ್ಕರ್ ಪತ್ರಿಕೆಗೆ ತಿಳಿಸಿದ್ದಾರೆ.
ರಾಜೇಶ್ ಮತ್ತು ಸುನೀಲ್, ತಂದಿಮ್ ಪಾಷಾ ಹಾಗೂ ಹಲ್ಲೆ ನಡೆಸಿದವರ ಮೇಲೆ ದೂರು ದಾಖಲಿಸಲಾಗುತ್ತಿದ್ದು ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಧರ್ಮ-ದೇವರುಗಳನ್ನು ಮನುಷ್ಯರು ರಕ್ಷಿಸಬೇಕಾ ?
ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಿ ಈ ಲಾಭಗಳನ್ನು ಪಡೆಯಿರಿ
ಉಕ್ರೇನ್ ನ ಗ್ಯಾಸ್ ಪೈಪ್ ಲೈನ್ ಸ್ಫೋಟಿಸಿದ ರಷ್ಯಾ
ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ