ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ - Mahanayaka
10:38 PM Wednesday 12 - March 2025

ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ

manipuaram elestion
28/02/2022

ಇಂಫಾಲ್: ಮಣಿಪುರದ 38 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆ 7ರಿಂದ ಆರಂಭವಾಗಿದೆ.

28 ವಿಧಾನ ಕ್ಷೇತ್ರಗಳಲ್ಲಿ ಕಣಿವೆ ಜಿಲ್ಲೆಗಳಾದ 29 ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರವಾಗಿದ್ದರೆ, ಉಳಿದ 9 ಕ್ಷೇತ್ರಗಳು ಚರ್ಚಂಡ್‍ಪುರ, ಕಾಂಗ್‍ಪೋಕ್ಪಿ ಮತ್ತು ಫರ್ಜಾಲ್ ಪ್ರದೇಶದಲ್ಲಿದೆ. ಮಣಿಪುರದ ವಿಧಾನಸಭೆ ಚುನಾವಣೆಯೂ 2ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ನಡೆಯುವ ಮತದಾನ ಸಂಜೆ 4ಗಂಟೆಗೆ ಕೊನೆಗೊಳ್ಳಲಿದೆ.

ಮೊದಲ ಹಂತದಲ್ಲಿ 15 ಮಹಿಳೆಯರು ಸೇರಿದಂತೆ ಒಟ್ಟು 173 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಮತ್ತು ಹೀಂಗಾಂಗ್‍ನ ಬಿಜೆಪಿ ಅಭ್ಯರ್ಥಿ ಎನ್. ಬಿರೇನ್ ಸಿಂಗ್, ಸಚಿವರಾದ ತೊಂಗಮ್ ಬಿಸ್ವಜಿತ್ ಸಿಂಗ್, ಸಿಂಗ್‍ಜಮೇಯ್‍ನಿಂದ ಸ್ಪೀಕರ್ ವೈ. ಖೇಮ್‍ಚಂದ್ ಸಿಂಗ್, ಉಪ ಮುಖ್ಯಮಂತ್ರಿ ಮತ್ತು ಎನ್‍ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್‍ಕುಮಾರ್ ಉರಿಪೋಕ್ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ನಂಬೋಲ್ ಅವರು ಇಂದು ನಡೆಯುವ ಮೊದಲ ಹಂತದ ಮತದಾನದಲ್ಲಿ ಸ್ಪರ್ಧಿಸಲಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾ ದಾಳಿ: 14 ಮಕ್ಕಳು ಸೇರಿದಂತೆ 352 ಮಂದಿ ನಾಗರಿಕರು ಸಾವು; ಉಕ್ರೇನ್‌

ಗಾಂಜಾ ಮಾರಾಟ: ಆರೋಪಿ ಬಂಧನ

ಮದ್ಯದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ: ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಬಂಧನ, ಬಿಡುಗಡೆ

ಉಕ್ರೇನ್ ​ನಿಂದ ಭಾರತಕ್ಕೆ ಬಂದಿಳಿದ 5ನೇ ವಿಮಾನ: 249 ಭಾರತೀಯರ ರಕ್ಷಣೆ

ಉಕ್ರೇನ್‌ ಗಡಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹಲ್ಲೆ, ಕಿರುಕುಳ

 

ಇತ್ತೀಚಿನ ಸುದ್ದಿ