ನವೀನ್ ಸಾವಿಗೆ ನೀಟ್ ವ್ಯವಸ್ಥೆಯೇ ಕಾರಣ: ನೀಟ್ ರದ್ದುಗೊಳಿಸಲು ಬೃಹತ್ ಅಭಿಯಾನ - Mahanayaka
10:22 PM Thursday 19 - September 2024

ನವೀನ್ ಸಾವಿಗೆ ನೀಟ್ ವ್ಯವಸ್ಥೆಯೇ ಕಾರಣ: ನೀಟ್ ರದ್ದುಗೊಳಿಸಲು ಬೃಹತ್ ಅಭಿಯಾನ

ban neet
03/03/2022

ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಸಾವಿಗೀಡಾದ ಬಳಿಕ ಕಾಲೇಜು ಪ್ರವೇಶ ಪ್ರಕ್ರಿಯೆಗಳ ಬಗ್ಗೆ  ಅಸಮಾಧಾನ ವ್ಯಕ್ತವಾಗಿದೆ.

ನವೀನ್ ಸಾವಿಗೆ  ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಕಾರಣವಾಗಿದ್ದು, ನೀಟ್ ರದ್ದುಪಡಿಸುವಂತೆ ಒತ್ತಾಯಿಸಿ ಬುಧವಾರ ಟ್ವಿಟ್ಟರ್ ನಲ್ಲಿ ಬೃಹತ್ ಅಭಿಯಾನ ನಡೆದಿದೆ.

ನೀಟ್ ಕೋಟ್ಯಂತರ ರೂಪಾಯಿ ದೋಚುವ ಲಾಬಿಯಾಗಿದ್ದು, ಇದರಿಂದಾಗಿ ಕನ್ನಡಿಗರ ಹಕ್ಕುಗಳು ಕಸಿಯಲ್ಪಸುತ್ತಿದೆ. ಕನ್ನಡಿಗರು ನೀಟ್ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಟ್ವೀಟ್ ಮಾಡಿದ್ದು, ನವೀನ್ ಸಾವಿನ ಹೊರೆಯನ್ನು ಹೊರುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.


Provided by

ಕನ್ನಡಿಗರ ಮಕ್ಕಳಿಗೆ ವೈದ್ಯಕೀಯ ಸೀಟು ಸಿಗುತ್ತಿಲ್ಲ. ನೀಟ್ ಹೆಸರಲ್ಲಿ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಕರ್ನಾಟಕದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್ ಎಂದು ಕನ್ನಡಿಗರು ಆರೋಪಿಸಿದರು.

ದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಬದಲು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ನೆರವಾಗಿ. ಶೇ.95ಕ್ಕೂ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ವಿದ್ಯಾರ್ಥಿಗಳಿಗೂ ವೈದ್ಯಕೀಯ ಸೀಟು ಸಿಗುತ್ತಿಲ್ಲ. ಆದ್ದರಿಂದ ಮೀಸಲಾತಿಯನ್ನು ದೂರುವುದನ್ನು ನಿಲ್ಲಿಸಿ, ನೀಟ್ ವ್ಯವಸ್ಥೆಯ ವಿರುದ್ಧ ಮಾತನಾಡಿ ಎಂದು ಚೇತನ್ ಎಂಬವರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ಒಳಗಡೆ ನಮಗೆ ಸರ್ಕಾರ ಯಾವುದೇ ರಕ್ಷಣೆ ನೀಡಲಿಲ್ಲ | ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿದ್ಯಾರ್ಥಿಗಳಿಂದ ಬೇಸರ

ಭಾರತೀಯರನ್ನು ಕರೆತರುವ ಕಾರ್ಯಚರಣೆಗೂ ‘ಗಂಗಾ’ ಹೆಸರಿಟ್ಟು ಪ್ರಧಾನಿ ಮೋದಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ

ಉಕ್ರೇನ್ ನಿಂದ ಸ್ಥಳಾಂತರ: ವಿಶ್ವಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚಳವಾಗಿರುವ ಸೂಚನೆ:  ಪ್ರಧಾನಿ ಮೋದಿ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್  ಗೆ ಇದೆ ಹಲವು ಗುಪ್ತ ಕಾಯಿಲೆಗಳು!

ಇತ್ತೀಚಿನ ಸುದ್ದಿ