ಹೈಟೆಕ್​​​ ವೇಶ್ಯಾವಾಟಿಕೆ ದಂಧೆ: ಮೂವರು ಆರೋಪಿಗಳ ಬಂಧನ - Mahanayaka

ಹೈಟೆಕ್​​​ ವೇಶ್ಯಾವಾಟಿಕೆ ದಂಧೆ: ಮೂವರು ಆರೋಪಿಗಳ ಬಂಧನ

vaishavatike1
03/03/2022

ಮಂಗಳೂರು: ನಗರದ ಅಪಾರ್ಟ್‌‌ಮೆಂಟ್‌ವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಕೆ.ಪಿ. ಹಮೀದ್(54), ಅನುಪಮಾ ಶೆಟ್ಟಿ(46), ನಿಶ್ಮಿತಾ(23) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್‌ವೆಲ್ ಬಳಿಯ ಅಪಾರ್ಟ್‌‌ಮೆಂಟ್‌​ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.  ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಬಂಧಿತರಿಂದ 5 ಮೊಬೈಲ್ ಫೋನ್ , 50 ಸಾವಿರ ರೂ. ನಗದು ಹಾಗೂ ಮಾರುತಿ 800 ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳೆಯ ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್: ಆರೋಪಿಯ ಬಂಧನ​

ಕೀವ್‌ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ

ಉಕ್ರೇನ್: ನವೀನ್ ಬಲಿಯಾದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಸಿಲುಕಿದ್ದಾರೆ ಉಜಿರೆ ವಿದ್ಯಾರ್ಥಿನಿ!

ನವೀನ್ ಸಾವಿಗೆ ನೀಟ್ ವ್ಯವಸ್ಥೆಯೇ ಕಾರಣ: ನೀಟ್ ರದ್ದುಗೊಳಿಸಲು ಬೃಹತ್ ಅಭಿಯಾನ

ಇತ್ತೀಚಿನ ಸುದ್ದಿ