ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮಭೂಮಿಗಾಗಿ ಹೋರಾಡಿದ ಧರ್ಮಶೀಲ ಭಂತೇಜಿ
ಭೀಮ ಮತ್ತು ಬುದ್ಧನ ಸಂಬಂಧಿತ ಐತಿಹಾಸಿಕ ಸ್ಥಳಗಳಿಗೆ ನಮ್ಮ ಪ್ರವಾಸದ ಮೊದಲ ಭೇಟಿ ಮಧ್ಯಪ್ರದೇಶದ ಇಂದೋರ್ ಸಮೀಪದ ಮಾಹುವಿನಲ್ಲಿರುವ ಅಂಬೇಡ್ಕರ್ ಜನ್ಮ ಭೂಮಿ.ಇಲ್ಲಿ ಬಿಳಿ ಮಾರ್ಬಲ್ ನ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ. ಸ್ಮಾರಕ ಎಷ್ಟು ಸುಂದರವಿದೆಯೋ ಹಾಗೆ ಅದನ್ನು ನಿರ್ಮಿಸಲು ಮತ್ತು ಅಲ್ಲಿನ ತುಂಡು ಭೂಮಿ ಪಡೆಯಲು ಧರ್ಮಶೀಲ ಭಂತೇಜಿಯವರ ಸಂಘರ್ಷದ ಹೋರಾಟ ಹಲವಾರು ವರ್ಷಗಳು ನಡೆದಿತ್ತು.
1970ರಲ್ಲಿ ಇಂದೋರ್ ನಲ್ಲಿ Military cantonmentನಲ್ಲಿ ಕಾರ್ಯನಿರ್ವಹಿಸುತ್ತಿದ್ದ D.G.Kevle ಯ ಮನೆಯ ಕಾರ್ಯಕ್ರಮಕ್ಕೆ ಬಂದ ಮಹಾರಾಷ್ಟದ ಭಂಡಾರ ಜಿಲ್ಲೆಯ ಭಂತೆ ಧರ್ಮಶೀಲ Kevle ಬಳಿ ಬಾಬಾ ಸಾಹೇಬರ ಜನ್ಮ ಸ್ಥಳದ ದರ್ಶನ ಮಾಡಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಆದರೆ ಬಾಬಾ ಸಾಹೇಬರು ಹುಟ್ಟಿದ್ದು Mhowನ ಮಿಲಿಟರಿ ಕಾಂನ್ಟೋನ್ಮೆಂಟ್ ಅಂತ ಗೊತ್ತಿದ್ದರೂ, ಯಾರಿಗೂ ನಿರ್ದಿಷ್ಟ ಸ್ಥಳದ ಮಾಹಿತಿ ಇರುವುದಿಲ್ಲ. ಭಂತೇಜಿಯವರು ಅಂದಿನಿಂದ ನಿರ್ದಿಷ್ಟ ಸ್ಥಳ ದೃಢಪಡಿಸಿಕೊಳ್ಳಲು ಹಲವಾರು ತಿಂಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು .ಹಲವು ಬಾರಿ ದೆಹಲಿಗೆ ಪ್ರಯಾಣಿಸಿದ ನಂತರ ಕೇಂದ್ರ ಸರ್ಕಾರವು ಸುಬೇದರ್ ರಾಮಜಿ ಸಕ್ಪಾಲ್ ವಾಸವಿದ್ದ ಕ್ವಾಟ್ರಸ್ ಮತ್ತು ಅಲ್ಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ವಾದದ್ದನ್ನು ದೃಢೀಕರಿಸುತ್ತದೆ. ಆದರೆ ಆ ಜಾಗವು ಸೈನ್ಯಕ್ಕೆ ಸಂಬಂಧಿತ ಸ್ಥಳ ವಾಗಿದ್ದರಿಂದ ಸಾಮಾನ್ಯ ನಾಗರಿಕರಿಗೆ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.
ಭಂತೇಜಿ ಕೆಲವು ಜನರೊಂದಿಗೆ ಆ ಸ್ಥಳಕ್ಕೆ ಹೋಗಿ ಒಂದು ಬೋರ್ಡನ್ನು ಇಟ್ಟು, ನೀಲಿ ದ್ವಜವನ್ನು ಕಟ್ಟಿ ಸಣ್ಣ ಸ್ಮಾರಕ ನಿರ್ಮಿಸಲು ನಿಶ್ಚಯಿಸುತ್ತಾರೆ. ಅನುಮತಿ ಇಲ್ಲದೆ ಬೋರ್ಡ್ ಹಾಕಿದ್ದರಿಂದ ಸೈನ್ಯದವರು ಎಲ್ಲವನ್ನೂ ಕಿತ್ತು ಎಸೆಯುತ್ತಾರೆ. ಅಲ್ಲಿ ಘೋಷಣೆ ಕೂಗಿದ ಭಂತೇಜಿ ಮೇಲೆ ದೈಹಿಕ ಹಲ್ಲೆಯಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದನ್ನು ತಿಳಿದ DG Kevle ಅವರು ಬ್ರಿಗೇಡಿಯರ್ ಕಾಳೆ ಯೊಂದಿಗೆ ಭಂತೇಜಿಯನ್ನು ಭೇಟಿ ಮಾಡುತ್ತಾರೆ .ಸೈನ್ಯದ ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಪ್ರವೇಶಿಸಿದ್ದು ತಪ್ಪು, ನೀವು ಒಂದು ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಬಾಬಾಸಾಹೇಬರು ಹುಟ್ಟಿದ ಮನೆ ಮತ್ತು ಆ ಜಾಗವನ್ನು ಸಂಸ್ಥೆಗೆ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಸಲಹೆ ನೀಡುತ್ತಾರೆ. ಅಲ್ಲಿಯವರೆಗೆ ಆ ಕ್ವಾಟರ್ಸ್ ಅನ್ನು ಯಾರಿಗೂ ಹಂಚಿಗೆ ಮಾಡದೆ ಸಂರಕ್ಷಿಸುವುದಾಗಿ ಭರವಸೆ ಕೊಡುತ್ತಾರೆ. ಭಂತೇಜಿಯವರು ಅವರು ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಸೊಸೈಟಿ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಕೊಂಡು ಹೋರಾಟವನ್ನು ಆರಂಭಿಸುತ್ತಾರೆ. ಹಲವಾರು ವರ್ಷಗಳು ಹೋರಾಟದ ನಂತರ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯು ಜಾಗವನ್ನು ನೀಡುವ ಘೋಷಣೆ ಮಾಡುತ್ತಾರೆ. ಆದರೆ 1984 ರಲ್ಲಿ ಅವರ ಹತ್ಯೆಯಾಗುತ್ತದೆ. ಮುಂದೆ ವಿ.ಪಿ.ಸಿಂಗ್ ಸರ್ಕಾರವು ಮನೆ ಮತ್ತು ಸುತ್ತಮುತ್ತಲಿನ 22,500 ಸ್ಕ್ವೇರ್ ಫೀಟ್ ಜಾಗವನ್ನು ಸಂಸ್ಥೆ ಹೆಸರಿಗೆ ಕೊಡುತ್ತಾರೆ. ಸಂಸ್ಥೆಗೆ ಜಾಗ ಸಿಕ್ಕಿ ನಂತರ ಬಂತೇಜಿ ಅವರು ಹಲವಾರು ನಾಯಕರುಗಳನ್ನು ಆ ಜಾಗಕ್ಕೆ ಆಹ್ವಾನಿಸುತ್ತಾರೆ ರಾಜೀವ್ ಗಾಂಧಿ, ವಾಜಪೇಯಿ, ಮಾನ್ಯವರ ಕಾನ್ಸಿರಾಮ್, ಮಾಯಾವತಿ ಮತ್ತು ಅಡ್ವಾಣಿ ಭೇಟಿ ಕೊಡುತ್ತಾರೆ ಹಾಗೂ ಉತ್ತಮ ಪ್ರಚಾರ ಸಿಗುತ್ತದೆ. ಬಾಬಾಸಾಹೇಬರ ನೂರನೇ ಜಯಂತಿಯ ಸಂದರ್ಭದಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಜನರು ಜನ್ಮ ಸ್ಥಳದಲ್ಲಿ ಸೇರುತ್ತಾರೆ. ಅದೇ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣ ಶಂಕುಸ್ಥಾಪನೆ ಆಗುತ್ತದೆ .ಸರಕಾರಗಳ ವಿಳಂಬ ನೀತಿಯಿಂದ ಹತ್ತು ವರ್ಷಗಳು ತಡವಾಗಿ 2008ರಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುತ್ತದೆ.
ಮನವಿ: ಬಾಬಾ ಸಾಹೇಬ ಅಂಬೇಡ್ಕರ್ ಜನ್ಮ ಭೂಮಿಯ ಸುತ್ತಮುತ್ತ ರಕ್ಷಣ ಸಚಿವಾಲಯಕ್ಕೆ ಒಳಪಟ್ಟ 7 ಎಕ್ರೆ ಖಾಲಿ ಜಾಗವಿದೆ . ಸ್ಮಾರಕದ ಅಭಿವೃದ್ಧಿಗಾಗಿ ಆ ಜಾಗವನ್ನು ಅಂಬೇಡ್ಕರ್ ಮೆಮೋರಿಯಲ್ ಸೊಸೈಟಿಗೆ ಕೊಡಲು ಮನವಿ ಮಾಡಿ ಪ್ರಧಾನಿ ಮತ್ತು ರಕ್ಷಣ ಸಚಿವಾಲಯಕ್ಕೆ ಎಲ್ಲರೂ ಪತ್ರ ಬರೆಯಲು ಕೊರಲಾಗಿದೆ
ಸಂಗ್ರಹ: ರಾಘು
ಹೆಚ್ಚಿನ ಮಾಹಿತಿಗಾಗಿ* *ಸಂಪರ್ಕಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮೆಮೋರಿಯಲ್ ಸೊಸೈಟಿ ಕಾರ್ಯಾಲಯದ ಉಸ್ತುವಾರಿ
ಮೋಹನರಾವ್ ದಾಕೋಡೆ
09926396260
ಮೂಲ: ಸಾಮಾಜಿಕ ಜಾಲತಾಣ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka