ಆಸ್ತಿ ವಿಚಾರ: ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ - Mahanayaka
7:32 AM Thursday 12 - December 2024

ಆಸ್ತಿ ವಿಚಾರ: ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ

shout
08/03/2022

ತಿರುವನಂತಪುರಂ: ಆಸ್ತಿ ವಿಚಾರ ಸಂಬಂಧ ಸ್ವಂತ ಅಣ್ಣನೇ ಒಡಹುಟ್ಟಿದ ತಮ್ಮನನ್ನೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ರಂಜು ಕುರಿಯನ್ ​​(50) ಕೊಲೆಯಾದ ವ್ಯಕ್ತಿ. ಜಾರ್ಜ್ ಕುರಿಯನ್ ಕೊಲೆ ಆರೋಪಿಯಾಗಿದ್ದಾನೆ. ಕೊಚ್ಚಿಯಲ್ಲಿ ರಿಯಲ್ ಎಸ್ಟೇಟ್​ ಉದ್ಯಮಿಯಾಗಿರುವ ಜಾರ್ಜ್,​ ಇತ್ತೀಚೆಗೆ ಕುಟುಂಬದ ಆಸ್ತಿ ಮಾರಾಟ ಮಾಡಿದ್ದ. ಊಟಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ತಮ್ಮ ರಂಜು ಆಸ್ತಿ ಮಾರಾಟದ ಬಗ್ಗೆ ತಿಳಿದುಕೊಳ್ಳಲು ಕೇರಳಕ್ಕೆ ಆಗಮಿಸಿದ್ದ. ಮಾತುಕತೆ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ಇದ್ದಕ್ಕಿದ್ದಂತೆ ರಿವಾಲ್ವರ್ ಹೊರತೆಗೆದಿರುವ ಜಾರ್ಜ್,​​ ಸಹೋದರನ ತಲೆಗೆ ಗುಂಡು ಹಾರಿಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ರಂಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ವೇಳೆ ಗುಂಡು ಹಾರಿಸುವುದನ್ನು ತಡೆಯಲು ಮುಂದಾಗಿದ್ದ ಸೋದರ ಮಾವ ಮ್ಯಾಥ್ಯೂ ಸ್ಕೇರಿಯಾಗೂ ಗುಂಡು ತಗುಲಿದೆ. ಇದರಿಂದ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೊಟ್ಟಾಯಂ ವೈದ್ಯಕೀಯ ಕಾಲೇಜಿ​ಗೆ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕದ್ದ ಬೈಕ್ ಸಮೇತ ಆರೋಪಿಯ ಬಂಧನ

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಸರ್ಕಾರಿ ವೈದ್ಯರು ಖಾಸಗಿ ಕಂಪೆನಿ ಔಷಧ ಸೂಚಿಸಿದರೆ ಕ್ರಮ: ಸಚಿವ ಸುಧಾಕರ್

ಈರುಳ್ಳಿ ಸೇವನೆಯಿಂದಾಗುವ ಪ್ರಯೋಜನಗಳೇನು?

ಪ್ರೀತಿಸಿ ಮದುವೆಯಾದ ಯುವತಿಯನ್ನು ಎಳೆದೊಯ್ದ ಪೊಲೀಸರು

 

ಇತ್ತೀಚಿನ ಸುದ್ದಿ