ಓಮ್ನಿ ಕಾರಿನಲ್ಲಿ ಅಮಾನುಷವಾಗಿ ಐದು ದನಗಳ ಸಾಗಾಟ | ಪೊಲೀಸರಿಂದ ದಾಳಿ
26/11/2020
ಮೂಡುಬಿದಿರೆ: ಓಮ್ನಿ ಕಾರಿನಲ್ಲಿ ಅಮಾನುಷವಾಗಿ ಐದು ದನಗಳನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಪೊಲೀಸರು ದನಗಳನ್ನು ರಕ್ಷಿಸಿದ್ದಾರೆ. ಓಮ್ನಿ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನುವುದು ಬಳಿಕ ಬಹಿರಂಗಗೊಂಡಿದೆ.
ಕಾರ್ಕಳ ಕಡೆಯಿಂದ ಮುಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಒಂದು ಓಮ್ನಿ ಕಾರಿನಲ್ಲಿ ಐದು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಲಾಗಿದ್ದು, ಅಮಾನವೀಯತೆ ಮೆರಯಲಾಗಿತ್ತು.
ಕಾರನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು, ಪೇಟೆಯ ಬಜಾಜ್ ಶೋರೂಂ ಬಳಿಯಲ್ಲಿ ಅಡ್ಡ ಹಾಕಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಆರೋಪಿಗಳು ಕಾರಿನಿಂದ ಇಳಿದು ಪೇಟೆಯೊಳಗೆ ಓಡಿ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.