ಯುವತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ
ಬೆಂಗಳೂರು: ಯುವತಿಯ ವಿಚಾರಕ್ಕೆ ಸಂಬಂಧಿಸಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಕೆ.ಜಿ.ಹಳ್ಳಿ ನಿವಾಸಿ ಮಹಮ್ಮದ್ ಉಸ್ಮಾನ್ ಕೊಲೆಯಾದ ಯುವಕ. ಯುವತಿಯ ವಿಚಾರಕ್ಕೆ ಉಸ್ಮಾನ್ ಹಾಗೂ ಸೈಯದ್ ಮೋಹಿನ್ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಉಸ್ಮಾನ್ ಕೊಲೆಗೆ ಸಂಚು ರೂಪಿಸಿದ್ದ ಮೋಹಿನ್, ಶಿವಾಜಿ ನಗರದಿಂದ ಹುಡುಗರನ್ನು ಕರೆಸಿದ್ದ. ಅದರಂತೆ ನಿನ್ನೆ ತಡರಾತ್ರಿ 11.30ರ ಸುಮಾರಿಗೆ ಪುಲಕೇಶಿ ನಗರದ ಡೌನ್ ಟೌನ್ ಬಳಿ ಉಸ್ಮಾನ್ ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಬೆಳಗಿನ ಜಾವ ಉಸ್ಮಾನ್ ಕೊಲೆ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಆರೋಪಿಗಳು, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಗಿದ್ದಾರೆ. ಈ ವೇಳೆ ಪಿಎಸ್ ಐ ರೂಮಾನ್ ಮತ್ತು ಆನಂದ್ ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಆದರೆ, ಆರೋಪಿಗಳು ಮತ್ತೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸೈಯದ್ ಮೋಹಿನ್ ಮತ್ತು ಅದ್ನಾನ್ ಖಾನ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳಿಕ ಉಳಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೈಯದ್ ಮೋಹಿನ್, ಅದ್ನಾನ್ ಖಾನ್, ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಬಂಧಿತ ಆರೋಪಿಗಳು. ಗಾಯಾಳು ಆರೋಪಿಗಳು ಹಾಗೂ ಗಾಯಗೊಂಡ ಪೊಲೀಸರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಝೆಲೆನ್ಸ್ಕಿ ನಿರ್ಧಾರ
ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ
ಉಕ್ರೇನ್ ನಲ್ಲಿ ಶೆಲ್ ದಾಳಿ ನಿಂತ ಬಳಿಕ ನವೀನ್ ಮೃತದೇಹ ತರುವ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪೊಲೀಸರಿಗೆ ಹೆದರಿ ಟಿಡಿಪಿ ಕಾರ್ಯಕರ್ತ ಆತ್ಮಹತ್ಯೆ
ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ