ರಷ್ಯಾದಲ್ಲಿ ಮೆಕ್‌ ಡೊನಲ್ಡ್‌, ಪೆಪ್ಸಿ, ಕೊಕಾ-ಕೊಲಾ ಕಂಪೆನಿಗಳಿಂದ ವಹಿವಾಟು ಸ್ಥಗಿತ - Mahanayaka
1:03 AM Wednesday 11 - December 2024

ರಷ್ಯಾದಲ್ಲಿ ಮೆಕ್‌ ಡೊನಲ್ಡ್‌, ಪೆಪ್ಸಿ, ಕೊಕಾ-ಕೊಲಾ ಕಂಪೆನಿಗಳಿಂದ ವಹಿವಾಟು ಸ್ಥಗಿತ

mcdonalds
09/03/2022

ನವದೆಹಲಿ: ಉಕ್ರೇನ್‌ ಮೇಲೆ ದಾಳಿ ಮುಮದುವರಿಸಿರುವ ರಷ್ಯಾದಲ್ಲಿ ಮೆಕ್‌ ಡೊನಾಲ್ಡ್‌, ಟಾಟಾ ಸ್ಟಾರ್‌ಮಕ್ಸ್‌ ಸೇರಿದಂತೆ ಜಾಗತಿಕ ಪಾನೀಯ ಬ್ರ್‍ಯಾಂಡ್‌ಗಳಾದ ಪೆಪ್ಸಿ, ಕೊಕಾ-ಕೋಲಾ ಕಮಪೆನಿಗಳು ತನ್ನ ಉತ್ಪಾದನೆ ಮತ್ತು ಮರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಸಾರ್ವಜನಿಕ ಒತ್ತಡಕ್ಕೆ ಮಣಿದಿರುವುದಾಗಿ ಕಂಪೆನಿಗಳು ತಿಳಿಸಿದ್ದು, ಈ ಮೂಲಕ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.
ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಸಂಕಷ್ಟಕ್ಕೆ ಸಿಲಕಿರುವ ಜನರೊಂದಿಗೆ ನಾವು ನಿಲ್ಲುತ್ತೇವೆ. ಜೊತೆಗೆ ರಷ್ಯಾ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಕ-ಕೋಲಾ ಕಂಪೆನಿ ತಿಳಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಅನಾವಶ್ಯಕ ದಾಳಿಗಳನ್ನು ನಿರ್ಲಕ್ಷಿಸಲು ಸಾದ್ಯವಿಲ್ಲ ಎಂದು ಫಾಸ್ಟ್‌ಫುಡ್‌ ಕಂಪೆನಿ ತಿಲಿದೆ. ಜೊಎಗೆ ರಷ್ಯಾದಲ್ಲಿ ತನ್ನ 850 ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿದೆ.

ಪೆಪ್ಸಿಕೊ ತನ್ನ ಪಾನೀಯಗಳನ್ನು ರಷ್ಯಾದಲ್ಲಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿದರೂ, ಹಾಲು ಮತ್ತು ಮಕ್ಕಳ ಆಹಾರದಂತಹ ಉತ್ಪನ್ನಗಳ ಮರಾಟ ಮುಂದುವರಿಸುವುದಾಗಿ ತಿಳಿಸಿದೆ. ಅಲ್ಲದೆ, ರಷ್ಯಾದಲ್ಲಿ 130 ಬ್ರಾಂಚ್‌ಗಳನ್ನು ಹೊಂದಿರುವ ಸ್ಟಾರ್‌ಬಕ್ಸ್‌, ಉತ್ಪನ್ನಗಳ ಸಾಗಣೆ ಸೇರಿದಂತೆ ಎಲ್ಲ ರೀತಿಯ ವಹಿವಟನ್ನು ಸಂಪೂರ್ಣವಗಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿಕೆ ನೀಡಿದೆ.

ಅಲ್ಲದೆ, ರಷ್ಯಾದಲ್ಲಿ ಸುಮಾರು 1,000ಕ್ಕೂ ಹೆಚ್ಚು ಕೆಎಫ್‌ಸಿ ರೆಸ್ಟೋರೆಂಟ್‌ಗಳು ಮತ್ತು 50 ಪಿಜ್ಜಾ ಹಟ್‌ ಮಳಿಗೆಗಳನ್ನು ಮುಚ್ಚುವುದಾಗಿ ಕಂಪೆನಿಗಳು ಘೋಷಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ರಷ್ಯಾದ ತೈಲ, ಅನಿಲ ಆಮದುಗಳ ಮೇಲೆ ನಿಷೇಧ ಘೋಷಿಸಿದ ಅಮೆರಿಕ : ಜೋ ಬೈಡನ್

ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್

ಉಕ್ರೇನ್​ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ​ ಝೆಲೆನ್ಸ್ಕಿ ನಿರ್ಧಾರ

ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್

ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ

 

ಇತ್ತೀಚಿನ ಸುದ್ದಿ