ರೈತ ವಿರೋಧಿ ಕೃಷಿ ಮಸೂದೆ ವಿರುದ್ಧ ಸಿಡಿದೆದ್ದ ರೈತರು - Mahanayaka
10:23 PM Thursday 12 - December 2024

ರೈತ ವಿರೋಧಿ ಕೃಷಿ ಮಸೂದೆ ವಿರುದ್ಧ ಸಿಡಿದೆದ್ದ ರೈತರು

27/11/2020

ಹರ್ಯಾಣಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದ್ದು ರೊಹ್ಟಕ್-ಜ್ಹಜ್ಜರ್ ಗಡಿಯಲ್ಲಿ ಇಂದು ಬೆಳಗ್ಗೆಯೇ ರೈತರು ಜಮಾಯಿಸಿದ್ದಾ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ರೈತರ ಪ್ರತಿಭಟನೆ ಮಧ್ಯೆ ಹರ್ಯಾಣ-ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿಂಘು ಗಡಿಯತ್ತ ವಾಹನ ಸಂಚಾರವನ್ನು ಪೊಲೀಸರು ತಡೆದಿದ್ದಾರೆ. ಅಂತರಾಜ್ಯ ವಾಹನಗಳು ಪೂರ್ವ ಮತ್ತು ಪಶ್ಚಿಮ ಫೆರಿಫೆರಲ್ ಎಕ್ಸ್ ಪ್ರೆಸ್ ವೇ ಮೂಲಕ ಸಂಚಾರ ನಡೆಸಬಹುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಇಂದು ಕೂಡ ಹರ್ಯಾಣ ದೆಹಲಿಯ ಗಡಿಯಲ್ಲಿ ಜಮಾಯಿಸಿದ ಪ್ರತಿಭಟನಾ ನಿರತ ರೈತರತ್ತ ಪೊಲೀಸರು ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಲು ನೋಡುತ್ತಿದ್ದಾರೆ. ಆದರೆ ಪ್ರತಿಭಟನಾಕಾರರ ಆಕ್ರೋಶ ಮುಗಿಲು ಮುಟ್ಟಿದೆ.

ಇತ್ತೀಚಿನ ಸುದ್ದಿ