ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಮುನ್ನಡೆ ಸಾಧಿಸಿದ ಪಕ್ಷಗಳು ಯಾವುದು? - Mahanayaka
11:06 PM Wednesday 11 - December 2024

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ಮುನ್ನಡೆ ಸಾಧಿಸಿದ ಪಕ್ಷಗಳು ಯಾವುದು?

election
10/03/2022

ನವದೆಹಲಿ: ತೀವ್ರ ಕುತೂಹಲ ಮೂಡಿಸಿರುವ ಪಂಚರಾಜ್ಯಗ ಉತ್ತರಪ್ರದೇಶ, ಉತ್ತರಾಖಂಡ್‌, ಗೋವಾ, ಮಣಿಪುರ ಹಾಗೂ ಪಂಜಾಬ್‌ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.

ಉತ್ತರ ಪ್ರದೇಶ: ಬಿಜೆಪಿ ಮುನ್ನಡೆ

ಸಾಕಷ್ಟು ಜಿದ್ದಾಜಿದ್ದಿನ ಕಣವಾಗಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಂಡು ಬಂದಿದೆ. ಉತ್ತರಪ್ರದೇಶದ  403 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚನೆಗೆ 202 ಸೀಟು ಬೇಕು.  ಈಗಾಗಲೇ ಬಿಜೆಪಿ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಸ್​​ ಪಿ-85 ಬಿಎಸ್ ​ಪಿ-3 ಕಾಂಗ್ರೆಸ್​-2  ಹಾಗೂ ಇತರೆ-2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

ಗೋವಾ: ಕಾಂಗ್ರೆಸ್ ಗೆ ಮುನ್ನಡೆ:

ಅತೀ ಚಿಕ್ಕ ರಾಜ್ಯವಾದರೂ ಚುನಾವಣಾ ದೃಷ್ಟಿಯಿಂದ ಸಾಕಷ್ಟು ಸದ್ದು ಮಾಡುತ್ತಿರುವ ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆದಿತ್ತು. ಒಟ್ಟು 332 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.  ಮತಎಣಿಕೆ ನಡೆಯುತ್ತಿದ್ದು, ಗೋವಾದಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ- 16, ಆಪ್​-0, ಇತರೆ 4 ಸ್ಥಾನ ಪಡೆದಿವೆ.

ಪಂಜಾಬ್: ಎಎಪಿ ಮುನ್ನಡೆ:

117 ವಿಧಾನಸಭೆಯ ಸ್ಥಾನಗಳನ್ನು ಹೊಂದಿರುವ ಪಂಜಾಬ್‌ ನಲ್ಲಿ ಚುನಾವಣೆಗೆ ಒಟ್ಟು 1,304 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಶೇ.71.95 ರಷ್ಟುಮತದಾನವಾಗಿದ್ದು, 66 ಸ್ಥಳಗಳಲ್ಲಿರುವ 117 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.   ಪಂಜಾಬ್​ ನಲ್ಲಿ ಆಮ್​ ಆದ್ಮಿ ಪಕ್ಷ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ-5, ಕಾಂಗ್ರೆಸ್​ 27 ಹಾಗೂ ಎಸ್​ ಎಡಿ 12 ಸ್ಥಾನ ಪಡೆದಿವೆ.

ಮಣಿಪುರ: ಬಿಜೆಪಿ ಮುನ್ನಡೆ:

ಮಣಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 265 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಣಿಪುರದಲ್ಲಿ ಬಿಜೆಪಿ 26, ಕಾಂಗ್ರೆಸ್​ 14, ಎನ್ ​ಪಿಪಿ 8 ಹಾಗೂ ಇತರೆ 1 ಒಂದು ಸ್ಥಾನ ಪಡೆದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ