ಪಾಕಿಸ್ತಾನದೊಳಗೆ ಆಕಸ್ಮಿಕವಾಗಿ ಉಡಾವಣೆಯಾದ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ!
ದೆಹಲಿ: ಪಾಕಿಸ್ತಾನದೊಳಗೆ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ(supersonic missile) ಆಕಸ್ಮಿಕವಾಗಿ ಉಡಾವಣೆಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಭಾರತ ಸರ್ಕಾರ ವಿಷಾದ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
ಉಡಾವಣೆಗೊಂಡ ಭಾರತೀಯ ಸೂಪರ್ಸಾನಿಕ್ ಕ್ಷಿಪಣಿ ನಿರಾಯುಧ ಕ್ಷಿಪಣಿಯಾಗಿದ್ದು, ಈ ಅಪಘಾತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾಗಿರುವುದು ಸಮಾಧಾನಕರ ವಿಚಾರವಾಗಿದೆ ಎಂದು ಭಾರತ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಶುಕ್ರವಾರ ಭಾರತೀಯ ರಾಯಭಾರಕ್ಕೆ ಕರೆ ಮಾಡಿದ್ದು ತನ್ನ ತೀವ್ರ ಪ್ರತಿಭಟನೆಯನ್ನು ತಿಳಿಸಿದೆ. ಈ ಘಟನೆಯ ಬಗ್ಗೆ ಪಾರದರ್ಶಕ ತನಿಖೆಗೆ ಪಾಕ್ ಒತ್ತಾಯಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೌದ್ಧ ಧರ್ಮದ ಅವಹೇಳನ ಆರೋಪ: ಸಚಿವ ಸುಧಾಕರ್ ವಿರುದ್ಧ ಪ್ರತಿಭಟನೆ
ಬಿಜೆಪಿಗೆ ಹೇಗೆ ಮತ ಗಳಿಸಬೇಕು ಎಂದು ಗೊತ್ತಿದೆ: ರಾಕೇಶ್ ಟೀಕಾಯತ್ ಹೇಳಿಕೆ
ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು !
ಕಾಂಗ್ರೆಸ್ ಅವನತಿ ಆರಂಭ: ಸಂಸದ ಪ್ರತಾಪ್ ಸಿಂಹ
ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?