ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ
ಕಾಶ್ಮೀರ: ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಫ್ಟರ್ ನ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಸಹ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದಾರೆ . ಬಿಎಸ್ ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಹೊರಟಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯಲ್ಲಿ ಬದುಕುಳಿದವರನ್ನು ಹುಡುಕಲು ಪ್ರಯತ್ನ ನಡೆಸಲಾಗುತ್ತಿದೆ. ಸದ್ಯ ಗಾಯಾಳು ಪೈಲಟ್ ನ್ನು ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ.
ಈ ಅಪಘಾತಕ್ಕೆ ಕಾರಣವೇನು ಎನ್ನುವುದು ತಕ್ಷಣದಲ್ಲಿ ತಿಳಿದು ಬಂದಿಲ್ಲ. ಅಧಿಕಾರಿಯೊಬ್ಬರ ಹೇಳಿಕೆಯ ಪ್ರಕಾರ ಹೆಲಿಕಾಫ್ಟರ್ ಲ್ಯಾಂಡ್ ಆಗಲು ಯತ್ನಿಸುತ್ತಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ರಾಜೀನಾಮೆ
ಭೀಕರ ರಸ್ತೆ ಅಪಘಾತ: ಡಿಎಂಕೆ ರಾಜ್ಯಸಭಾ ಸದಸ್ಯನ ಪುತ್ರ ಸಾವು
ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು
ಕಚ್ಚಾ ತೈಲ ಬೆಲೆಯಲ್ಲಿ ಬಾರೀ ಇಳಿಕೆ
ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು