ಕೌಟುಂಬಿಕ ಕಲಹ: ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ - Mahanayaka
5:17 PM Thursday 12 - December 2024

ಕೌಟುಂಬಿಕ ಕಲಹ: ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

crime 1
12/03/2022

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗದಗ ಪಟ್ಟಣದಲ್ಲಿ ನಡೆದಿದೆ.

ಅಪೂರ್ವ ಶಿರೂರ(26) ಹಲ್ಲೆಗೊಳಾಗದ ಮಹಿಳೆಯಾಗಿದ್ದು, ಆಕೆಯ ಪತಿ ಇಜಾಜ್(38)​ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಲ್ಲಿಯಲ್ಲಿ ಆಟೋ ಚಾಲಕನಾಗಿದ್ದ ಇಜಾಜ್ ಶಿರೂರನೊಂದಿಗೆ ಅಪೂರ್ವ ಪ್ರೀತಿಯಾಗಿ ಪೋಷಕರ ವಿರೋಧದ ನಡುವೆಯೂ ಅವನೊಂದಿಗೆ ಮದುವೆಯಾಗಿದ್ದಳು.

ಮದುವೆಯಾದ ನಂತರ ಅಪೂರ್ವಳ ಹೆಸರನ್ನು ಅರ್ಫಾ ಭಾನು ಎಂದು ಇಜಾಜ್​ ಬದಲಿಸಿದ್ದ. ಅಲ್ಲದೆ, ಈ ದಂಪತಿಗೆ ಮಗು ಕೂಡ ಇದೆ. ಕೆಲವು ದಿನಗಳ ಬಳಿಕ ಇಜಾಜ್​ಗೆ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದಾರೆ ಎಂಬ ಸುದ್ದಿ ಅಪೂರ್ವಳಿಗೆ ತಿಳಿದಿದೆ.

ಹೀಗಾಗಿ ಅಪೂರ್ವ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅಂದಿನಿಂದ ತವರು ಮನೆಯಲ್ಲಿಯೇ ವಾಸವಾಗಿದ್ದರು. ವಿಚ್ಛೇದನ ಅರ್ಜಿಯಿಂದ ಕುಪಿತಗೊಂಡು ಕೊಲೆ ಮಾಡೋದಾಗಿ ಬೆದರಿಕೆ‌ ಹಾಕಿದ್ದ ಇಜಾಜ್ ನಿನ್ನೆ ಸಂಜೆ ಗದಗ್​ನ ಲಯನ್ಸ್ ಮೈದಾನದಲ್ಲಿ ಅಪೂರ್ವ ಸ್ಕೂಟಿ ಕಲಿಯಲು ಹೋದಾಗ ಏಕಾಏಕಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅಪೂರ್ವಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರೈತರ ವಿರೋಧ ಕಟ್ಟಿಕೊಳ್ಳಬೇಡಿ: ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಎಚ್ಚರಿಕೆ

ಅನುಮಾನಾಸ್ಪದ ರೀತಿಯಲ್ಲಿ ವಕೀಲೆ ಆತ್ಮಹತ್ಯೆ

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು

ಭೀಕರ ರಸ್ತೆ ಅಪಘಾತ: ಕಾರು ಚಾಲಕ ಸೇರಿ ಐದು ಮಂದಿ ಸ್ಥಳದಲ್ಲೇ ಸಾವು

ರಷ್ಯಾ ಸೇನೆಯಿಂದ ಉಕ್ರೇನ್‌ ಮೇಯರ್‌ ಕಿಡ್ನಾಪ್: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ

 

ಇತ್ತೀಚಿನ ಸುದ್ದಿ