ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಭಗವಂತ್ ಮಾನ್: ರ್‍ಯಾಲಿಯಲ್ಲಿ ಭಾಗವಹಿಸಲಿರುವ ಕೇಜ್ರಿವಾಲ್
ಅಮೃತಸರ: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಅಮೃತಸರದಲ್ಲಿ ಎಎಪಿ ವಿಜಯೋತ್ಸವವನ್ನು ಆಚರಿಸುತ್ತಿದೆ. ಸಂಭ್ರಮಾಚರಣೆಗಾಗಿ ಪಂಜಾಬ್ ನಲ್ಲಿರುವ ಅರವಿಂದ್ ಕೇಜ್ರಿವಾಲ್, ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಅವರೊಂದಿಗೆ ರ್‍ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.
ಪಂಜಾಬ್ ನಲ್ಲಿ ಇದೇ ತಿಂಗಳ 16ರಂದು ಭಗವಂತ್ ಮಾನ್ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಹದಿನಾರು ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.
ಪಂಜಾಬ್ ಕ್ಯಾಬಿನೆಟ್ ನಲ್ಲಿ ಹತ್ತು ಸಚಿವರ ಹೆಸರುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪಟ್ಟಿಯಲ್ಲಿ ಹರ್ಪಾಲ್ ಸಿಂಗ್ ಚೀಮಾ, ಅಮನ್ ಅರೋರಾ, ಮೆಥ್ ಹೈಯರ್, ಜೀವನ್ ಜ್ಯೋತ್ ಕೌರ್, ಕುಲ್ತಾರ್ ಸಂದ್ವಾನ್, ಚರಂಜಿತ್, ಕುಲ್ವಂದ್ ಸಿಂಗ್, ಅನ್ಮೋಲ್ ಗಗನ್‌ಮನ್, ಸರ್ವ್‌ಜಿತ್ ಕೌರ್ ಮತ್ತು ಬಲ್ಜಿಂದರ್ ಕೌರ್ ಇದ್ದಾರೆ.
ಮೊದಲ ಪಟ್ಟಿಯಲ್ಲಿ ಮೂವರು ಮಹಿಳೆಯರು ಇದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಅಂಗವಾಗಿ ಅಮೃತಸರದಲ್ಲಿ ಎಎಪಿ ವಿಜಯೋತ್ಸವವನ್ನು ನಡೆಸುತ್ತಿದೆ. ಭಗವಂತ್ ಮಾನ್ ಅವರೊಂದಿಗೆ ಸಂಭ್ರಮಾಚರಣೆಗಾಗಿ ಅರವಿಂದ್ ಕೇಜ್ರಿವಾಲ್ ಪಂಜಾಬ್‌ಗೆ ಆಗಮಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್
ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು!
ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ