ಗರ್ಭಿಣಿ ಹೆಂಡತಿ ಮೇಲೆ ಡೀಸೆಲ್ ಸುರಿದು ಕೊಲೆ ಯತ್ನ ಪ್ರಕರಣ: ಆರೋಪಿಯ ಬಂಧನ
15/03/2022
ಬೆಂಗಳೂರು: ಗರ್ಭಿಣಿ ಹೆಂಡತಿಯ ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಸಂಬಂಧ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಭೀಮಾ ಶಂಕರ ಗುಳೇದ್ ತಿಳಿಸಿದ್ದಾರೆ.
ಬಾಬು (37) ಬಂಧಿತ ಆರೋಪಿ. ಕಾಕ್ಸ್ಟೌನ್ ದೊಡ್ಡಗುಂಟೆಯಲ್ಲಿ ವಾಸವಾಗಿದ್ದ ಮೀನಾ (23) ಎಂಬಾಕೆಯನ್ನು ಕೊಲೆ ಮಾಡಲು ಈತ ಯತ್ನಿಸಿದ್ದ. ಘಟನೆಯಿಂದ ಗಾಯಗೊಂಡಿದ್ದ ಗರ್ಭಿಣಿ ವಿಕ್ಟೋರಿಯಾ ಆಸತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಕಳೆದ ಮಾ. 9ರಂದು ಕುಡಿದು ಹಣ ಖರ್ಚು ಮಾಡುವ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಹಣ ಕೇಳಿದರೆ ಮೈಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೇನೆ ಎಂದು ಮೀನಾ ಕೋಪದಲ್ಲಿ ಹೇಳಿದ್ದಾಳೆ. ಇದರಿಂದ ಆಕ್ರೋಶಿತನಾದ ಆರೋಪಿ ಬಾಬು, ನೀನ್ಯಾಕೆ ಸಾಯುತ್ತೀಯ?, ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.