ಹೆತ್ತ ಕಂದಮ್ಮನ್ನು ಜೀವಂತ ಸಮಾಧಿ ಮಾಡಿದ ತಾಯಿ - Mahanayaka
10:55 PM Thursday 21 - November 2024

ಹೆತ್ತ ಕಂದಮ್ಮನ್ನು ಜೀವಂತ ಸಮಾಧಿ ಮಾಡಿದ ತಾಯಿ

lakno
17/03/2022

ಲಕ್ನೋ: ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಹೆತ್ತ ತಾಯಿಯೇ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ನಡೆದಿದ್ದು, ಆದರೆ, ಆ ಮಗು ಅಚ್ಚರಿಯ ರೀತಿಯಲ್ಲಿ ಪವಾಡಸದೃಶವಾಗಿ ಬದುಕುಳಿದಿದೆ.

ಬಸ್ತಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಹೆರಿಗೆ ನಂತರ ತಾಯಿಯೊಬ್ಬಳು ಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದು, ಗುಂಡಿ ತೆಗೆದು ಮಗುವನ್ನು ಮುಚ್ಚಲು ಯತ್ನಿಸಿದ್ದಾಳೆ. ಈ ವೇಳೆ ಮಗು ಅಳಲು ಆರಂಭಿಸಿದೆ. ಇದರಿಂದ ಗಾಬರಿಗೊಂಡ ತಾಯಿ, ಮಗುವನ್ನು ಅರ್ಧಂಬರ್ಧ ಮಣ್ಣಿನಿಂದ ಮುಚ್ಚಿ ಪರಾರಿಯಾಗಿದ್ದಾಳೆ.

ದಾರಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಮಗುವಿನ ಅಳುತ್ತಿರುವ ಶಬ್ಧ ಕೇಳಿದ್ದು, ಮಗು ಅಳುತ್ತಿರುವ ಶಬ್ದದ ಕಡೆ ಮಹಿಳೆ ಹೋಗಿ ನೋಡಿದ್ದಾರೆ. ಅಲ್ಲಿ ಮಗುವನ್ನ ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಕಂಡಿದ್ದಾರೆ.

ತಕ್ಷಣ ಮಹಿಳೆ ಈ ಘಟನೆ ಬಗ್ಗೆ ಜಿಲ್ಲಾಸ್ಪತ್ರೆಗೆ ಸುದ್ದಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆ ಸಿಬ್ಬಂದಿ ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕಾಮಿಸಿದ ಪೊಲೀಸರು ಮಗುವಿನ ರಕ್ಷಣಾ ಕಾರ್ಯ ಕೈಗೊಂಡರು. ಅನಾಥ ಮಗುವನ್ನು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲು ಮಾಡಲಾಗಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಐದು ನಿಮಿಷಗಳ ಚಾರ್ಜ್‌ ನಲ್ಲಿ 650 ಕಿ.ಮೀ. ಓಡಬಲ್ಲದು ಈ ಎಲೆಕ್ಟ್ರಿಕ್ ಕಾರು

ಅಂಗನವಾಡಿ ಕಟ್ಟಡಕ್ಕೆ ಬೆಂಕಿ: ಅದೃಷ್ಟವಶಾತ್​ ಮಕ್ಕಳು ಪ್ರಾಣಾಪಾಯದಿಂದ ಪಾರು

ಉಕ್ರೇನ್ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ: ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಸಾವು

ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ: 2022

ಪ್ರತಿಭಟನೆ ಅವರ ಹಕ್ಕು, ಶಾಂತಿಯುತವಾಗಿ ಮಾಡಿಕೊಳ್ಳಲಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

 

ಇತ್ತೀಚಿನ ಸುದ್ದಿ