ಅಂಗನವಾಡಿ ಕಟ್ಟಡಕ್ಕೆ ಬೆಂಕಿ: ಅದೃಷ್ಟವಶಾತ್​ ಮಕ್ಕಳು ಪ್ರಾಣಾಪಾಯದಿಂದ ಪಾರು - Mahanayaka

ಅಂಗನವಾಡಿ ಕಟ್ಟಡಕ್ಕೆ ಬೆಂಕಿ: ಅದೃಷ್ಟವಶಾತ್​ ಮಕ್ಕಳು ಪ್ರಾಣಾಪಾಯದಿಂದ ಪಾರು

anganvadi
17/03/2022

ಚಾಮರಾಜನಗರ: ಅಂಗನವಾಡಿ ಹಿಂಭಾಗದಲ್ಲಿ ಬಿದ್ದಿದ್ದ ಒಣಗಿದ ಎಲೆ, ಕಸ ಕಡ್ಡಿ ಸುಡಲು ಹಚ್ಚಿದ ಬೆಂಕಿ ಅಂಗನವಾಡಿ ಕಟ್ಟಡಕ್ಕೂ ತಗುಲಿರುವ ಘಟನೆ ಹನೂರು ಪಟ್ಟಣದಲ್ಲಿ ಸಂಭವಿಸಿದೆ.

ಹನೂರು ಪಟ್ಟಣದ ಪ್ರವಾಸಿ ಮಂದಿರದ ಒಳಗಿರುವ ಅಂಗನವಾಡಿದಲ್ಲಿ ಈ ಘಟನೆ ಸಂಭವಿಸಿದ್ದು, ಕೆಂದ್ರದಲ್ಲಿ ಕೆಲಸ ಮಾಡುತ್ತಿದ್ದ ಆಯಾ ಕಟ್ಟಡದ ಹಿಂಭಾಗ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚಿದ್ದಾರೆ. ಅದು ಪಕ್ಕದಲ್ಲೇ ಇದ್ದ ಮರದ ಪಟ್ಟಿಗೆ ಹಬ್ಬಿ ಅಂಗನವಾಡಿಯ ಕಿಟಕಿಗೂ ಬೆಂಕಿ ತಗುಲಿದೆ. ತಕ್ಷಣ ಒಳಗಿದ್ದ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಲಾಯಿತು.

ಕೇಂದ್ರದಲ್ಲಿ ಒಟ್ಟು 40 ಮಕ್ಕಳು ಓದುತ್ತಿದ್ದು, ಗುರುವಾರ ಬೆಳಗ್ಗೆ 4 ಮಕ್ಕಳು ಮಾತ್ರ ಹಾಜರಾಗಿದ್ದರು. ಕಿಟಕಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿ ತಕ್ಷಣ ಮಕ್ಕಳನ್ನು ರಕ್ಷಿಸಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ: ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಸಾವು

ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ: 2022

ಪ್ರತಿಭಟನೆ ಅವರ ಹಕ್ಕು, ಶಾಂತಿಯುತವಾಗಿ ಮಾಡಿಕೊಳ್ಳಲಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ: ಮೇಘಾಲಯ ಹೈಕೋರ್ಟ್

ಜಪಾನ್‍ ನಲ್ಲಿ ಭಾರೀ ಭೂಕಂಪ: ನಾಲ್ವರ ಸಾವು, 90 ಮಂದಿಗೆ ಗಾಯ

 

 

ಇತ್ತೀಚಿನ ಸುದ್ದಿ