18 ಸರ್ಕಾರಿ ಕಚೇರಿ ಅಧಿಕಾರಿಗಳ ಅಕ್ರಮ ಆಸ್ತಿ ಬಯಲಿಗೆಳೆದ ಎಸಿಬಿ - Mahanayaka
10:20 PM Thursday 21 - November 2024

18 ಸರ್ಕಾರಿ ಕಚೇರಿ ಅಧಿಕಾರಿಗಳ ಅಕ್ರಮ ಆಸ್ತಿ ಬಯಲಿಗೆಳೆದ ಎಸಿಬಿ

acb
18/03/2022

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗೆ ಒಳಗಾಗಿದ್ದ 18 ಸರ್ಕಾರಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿವಾನಂದ ಅಲಿಯಾಸ್ ಪೀರಪ್ಪ ಶರಣಪ್ಪ ಕೇದಗಿ (ಶೇ.325), ಮೈಸೂರು ನಗರ ವಿಜಯನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಚ್.ಎನ್. ಬಾಲಕೃಷ್ಣಗೌಡ (ಶೇ.129.42), ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವೃತ್ತ ಅಬಕಾರಿ ಇನ್‌ಸ್ಪೆಕ್ಟರ್ ಚೆಲುವರಾಜು (ಶೇ.256), ರಾಮನಗರ ಉಪ ವಿಭಾಗದ ಎಸಿ ಸಿ.ಮಂಜುನಾಥ್ (ಶೇ.216.25), ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು (ಮೂಲಸೌಕರ್ಯ) ಎ. ಶ್ರೀನಿವಾಸ್ (ಶೇ.222.082), ಚಿಕ್ಕಮಗಳೂರು ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ಎಚ್.ಗವಿರಂಗಪ್ಪ (ಶೇ.81), ಕೊಪ್ಪಳ ಜಿಲ್ಲೆ ಯಲಬುರ್ಗದ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ (ಶೇ.200.14), ರಾಯಚೂರು ಜಿಲ್ಲೆ ದೇವದುರ್ಗದ ಕೃಷ್ಣ ಭಾಗ್ಯ ಜಲ ನಿಗಮದ ಎಇಇ ಅಶೋಕ ರೆಡ್ಡಿ ಪಾಟೀಲ್ (ಶೇ.164.19), ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ (ಶೇ.198.15), ಹಾವೇರಿ ಜಿಲ್ಲೆ ಎಪಿಎಂಸಿ ಉಪ ವಿಭಾಗದ ಎಇಇ ಕೃಷ್ಣ ಕೇಶಪ್ಪ ಆರೇರ (ಶೇ.184.71)ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ.ಶಿವಕುಮಾರ್ (ಶೇ.300), ಸಾರಿಗೆ ಇಲಾಖೆ (ರಸ್ತೆ ಸುರಕ್ಷತೆ) ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ (ಶೇ.121), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಯೋಜನೆ ನಗರ) ಉಪ ನಿರ್ದೇಶಕರ ವಿ.ರಾಕೇಶ್ ಕುಮಾರ್ (ಶೇ.131), ಯಾದಗಿರಿ ಜಿಲ್ಲೆ ಆರ್‌ಎಫ್‌ಓ (ಸಾಮಾಜಿಕ ಅರಣ್ಯ) ರಮೇಶ್ ಕನಕಟ್ಟೆ (ಶೇ.382.01), ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಜಿಆರ್‌ಎಸ್ ಕೌಜಲಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವರಾಜ ಶೇಖರ್ ರೆಡ್ಡಿ ಪಾಟೀಲ್ (ಶೇ.174.47), ಗದಗ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್ ಬಸವಕುಮಾರ್ ಎಸ್. ಅಣ್ಣಿಗೇರಿ (ಶೇ.190),ಅಕ್ರಮ ಆಸ್ತಿ ಸಂಪತ್ತು ಹೊಂದಿದ್ದಾರೆ ಎಂದು ಎಸಿಬಿ ವಿವರಿಸಿದೆ ಎಂದು ವರದಿಯಾಗಿದೆ.

ವಿಜಯಪುರ ಜಿಲ್ಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್ ನಾಗೇಂದ್ರ (ಶೇ.929) ಅತಿ ಹೆಚ್ಚು ಆಕ್ರಮ ಆಸ್ತಿ ಹೊಂದಿದ್ದರೆ, ಮಂಗಳೂರಿನ ಕೆಪಿಟಿಎಸ್‌ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಯಾಳು ಸುಂದರ್ ರಾಜ್ (ಶೇ.55.10) ಕಡಿಮೆ ಅಕ್ರಮ ಸಂಪತ್ತು ಗಳಿಸಿದ್ದಾರೆ. ಉಳಿದಂತೆ ಎಲ್ಲ ಅಧಿಕಾರಿಗಳ ಆದಾಯ ನೂರಾರು ಪಟ್ಟು ಏರಿಕೆ ಆಗಿದೆ.

ಆರೋಪಿಗಳ ದಾಖಲೆ ಪರಿಶೀಲನೆ ಮುಂದುವರಿದಿದ್ದುಅಕ್ರಮ ಆಸ್ತಿಯ ಮೌಲ್ಯವು ಇನ್ನೂ ಹೆಚ್ಚಾಗಬಹುದೆಂದು ಎಸಿಬಿ   ಅಧಿಕಾರಿಗಳು ಹೇಳಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ

ಚಂಡಮಾರುತದ ಹೊಡೆತಕ್ಕೆ ಮುಳುಗಿದ 30 ಸಿಬ್ಬಂದಿ ಇದ್ದ ಯುಎಇ ಹಡಗು

ಪಡೀಲ್- ಕುಲಶೇಖರ ಜೋಡಿ ರೈಲು ಮಾರ್ಗ ಕಾಮಗಾರಿ: ಮಾರ್ಚ್​ 20ರವರೆಗೆ  ರೈಲು ಸಂಚಾರ ಸ್ಥಗಿತ

ಹೊಳೆಗೆ ಉರುಳಿ ಬಿದ್ದ ಕೆಎಸ್ಸಾರ್ಟಿಸಿ ಬಸ್: 25ಕ್ಕೂ ಅಧಿಕ ಮಂದಿಗೆ ಗಾಯ

ಇತ್ತೀಚಿನ ಸುದ್ದಿ