ಹೋಳಿ ಆಡುತ್ತಿದ್ದ ವೇಳೆ ದುರಂತ: ನೀರಿನ ತೊಟ್ಟಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು
ವರದಿ: ಬಸವರಾಜ ತಳೇವಾಡ
ವಿಜಯಪುರ ಜಿಲ್ಲೆ: ಹೋಲಿ ಆಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕನೋರ್ವ ಸಾವಿಗೀಡಾದ ದಾರುಣ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.
12 ವರ್ಷ ವಯಸ್ಸಿನ ಹನುಮಂತ ಬೀರಪ್ಪ ವಾಲಿಕಾರ ಮೃತ ಬಾಲಕ ಎಂದು ಗುರುತಿಸಲಾಗಿದೆ. ಹೋಲಿಯಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ಕಟ್ ಆಗಿ ನೀರಿನ ತೊಟ್ಟಿಗೆ ಬಿದ್ದಿದ್ದು, ಪರಿಣಾಮವಾಗಿ ಬಾಲಕ ಸಾವಿಗೀಡಾಗಿದ್ದಾನೆ.
ಘಟನೆಗೆ ಗ್ರಾಮ ಪಂಚಾಯತ್ ನ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ ಬಾಲಕನ ಪೋಷಕರು, ಕುಟುಂಬಸ್ಥರು ಗ್ರಾಮ ಪಂಚಾಯತ್ ಮುಂದೆ ಬಾಲಕ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ N T P C ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ನಲ್ಲಿ ಇನ್ನೂ ಸಿಲುಕಿರುವ 50 ಭಾರತೀಯರು
ಆದಿಚುಂಚನಗಿರಿ ಮಹಾರಥೋತ್ಸದಲ್ಲಿ ಕಾಲ್ತುಳಿತ: ವೃದ್ಧೆ ಬಲಿ
ಪೇರಳೆ ಹಣ್ಣಿನಾಸೆ: ಮರ ಹತ್ತಲು ಹೋಗಿ ಪ್ರಾಣವನ್ನೇ ಕಳಕೊಂಡ ಬಾಲಕ
ಎಲ್ಲ ಹಿಂದೂಗಳೂ, ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ: ವಿ.ಸೋಮಣ್ಣ
ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ