ಬಿಜೆಪಿ, ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಹಾಸನ: ಬಿಜೆಪಿ ಜೊತೆ ಹೊಂದಾಣಿಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರು, ಬಿಜೆಪಿ, ಕಾಂಗ್ರೆಸ್ ಇಬ್ಬರ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಈ ವಯಸ್ಸಿನಲ್ಲಿ ಇಷ್ಟು ಹೋರಾಡುವುದು ಅವರ ಮನೆ ಬಾಗಿಲಿಗೆ ಹೋಗುವುದಕ್ಕಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿ 120 ಶಾಸಕರಿದ್ದಾರೆ. ಅವರು ನಮ್ಮ ಜೊತೆ ಏಕೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ನಾವು ಬಿಜೆಪಿ, ಕಾಂಗ್ರೆಸ್ ಇಬ್ಬರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಹತ್ತಿರ, ಕುಮಾರಸ್ವಾಮಿ ಅವರ ಹತ್ತಿರ ಮಾತನಾಡಿದ ಮೇಲೆ ಅವರು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಾರೆ. ನಮ್ಮ ಪಕ್ಷದ ಎಲ್ಲಾ ಎಂಎಲ್ಗಳನ್ನು ಕರೆದು ಅತಿ ಶೀಘ್ರದಲ್ಲಿಯೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಜಿ.ಟಿ.ದೇವೇಗೌಡ ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಅವರು, ಯಾರೂ ಚಾಮುಂಡೇಶ್ವರಿ, ಹುಣಸೂರಿನಲ್ಲಿ ಎರಡು ಕಡೆ ಟಿಕೆಟ್ ಕೊಡಲು ಒಪ್ಪಿಕೊಳ್ಳುತ್ತಾರೋ ಅವರ ಜೊತೆ ಚರ್ಚೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ಅಲ್ಲ. ನನಗೆ, ನನ್ನ ಮಗನಿಗೆ ಟಿಕೆಟ್ ಬೇಕು ಅಂತ ಕಾಂಗ್ರೆಸ್ ಜೊತೆ ಮಾತನಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಕ್ಷೇತ್ರದ ಕೆಲಸಕ್ಕೆ ಹೋಗಿದ್ದೆ ಅಂತ ಹೇಳಿದ್ದರು. ಆದ್ದರಿಂದ ಮನಸ್ಸಿನಲ್ಲಿ ಈಗಲೇ ಸಂಪೂರ್ಣವಾಗಿ ತೀರ್ಮಾನಕ್ಕೆ ಬರೋದು ಒಳ್ಳೆಯದು ಎಂದರು.
ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ವಿಚಾರವಾಗಿ ಮಾತನಾಡಿ, ಕೋರ್ಟ್ ಆದೇಶ ಒಪ್ಪಬೇಕು ಎಂಬುದು ನಮ್ಮ ಪಕ್ಷದ ನಿಲುವು. ಇಂತಹದ್ದನ್ನೇ ಪ್ರಚೋದನೆ ಮಾಡಿ, ಬಿಜೆಪಿಯವರು ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಅದಕ್ಕೆ ಅನುಕೂಲವಾಗಿ ಕಾಂಗ್ರೆಸ್ನವರು ಹೋಗ್ತಾರೆ. ನಾನು, ಕುಮಾರಸ್ವಾಮಿ ಮೊದಲಿಂದಲೂ ಕೋರ್ಟ್ ಏನು ತೀರ್ಪು ಕೊಡುತ್ತೋ, ಅದಕ್ಕೆ ಬದ್ಧವಾಗಬೇಕೆಂದು ಹೇಳಿದ್ದೇವೆ. ಅದು ನಮ್ಮ ನಿಲುವು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟಿಬೆಟಿಯನ್ ಬೋಧಿಸತ್ವ ಪ್ರತಿಜ್ಞೆ ಸಮಾರಂಭ ನೆರವೇರಿಸಿದ ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ
ಬೈಕ್ ಗೆ KSRTC ಬಸ್ ಡಿಕ್ಕಿ: ಸಹೋದರರಿಬ್ಬರು ಸ್ಥಳದಲ್ಲೇ ಸಾವು
ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿರುವ ಐವರು ಕಾರ್ಮಿಕರು