ಹೋಳಿ ಆಚರಣೆ ವೇಳೆ ಎದೆಗೆ ಚೂರಿಯಿಂದ ಇರಿದುಕೊಂಡು ಯುವಕ ಸಾವು - Mahanayaka
2:07 AM Wednesday 5 - February 2025

ಹೋಳಿ ಆಚರಣೆ ವೇಳೆ ಎದೆಗೆ ಚೂರಿಯಿಂದ ಇರಿದುಕೊಂಡು ಯುವಕ ಸಾವು

holi
19/03/2022

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೋಳಿ ಆಚರಣೆ ವೇಳೆ 38 ವರ್ಷದ ಯುವಕನೋರ್ವ ಆಕಸ್ಮಿಕವಾಗಿ ಚಾಕುವಿನಿಂದ  ಸ್ವಂತ ಇರಿದು ಸಾವನ್ನಪ್ಪಿರುವ  ಘಟನೆ ನಡೆದಿದೆ .

38 ವರ್ಷದ ಗೋಪಾಲ  ಸೊಲಕ್ಕಿ ಹೋಳಿ ಆಚರಣೆ ವೇಳೆ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿದ್ದಾಗ  ಆಕಸ್ಮಿಕವಾಗಿ ತನಗೆ ತಾನೆ ಚೂರಿಯಿಂದ ಇರಿದುಕೊಂಡಿದ್ದಾನೆ ಎನ್ನಲಾಗಿದೆ.

ವಿಪರೀತ ಮದ್ಯದ ನಶೆಯಲ್ಲಿದ್ದ ಸೋಲಂಕಿ, ಸ್ನೇಹಿತರೊಂದಿಗೆ ಹೋಳಿ ಆಚರಿಸಿ ಡ್ಯಾನ್ಸ್ ಮತ್ತು ಸ್ಟಂಟ್ ಮಾಡುತ್ತಿದ್ದ.ಈ ವೇಳೆ  ಸೋಲಂಕಿ ಸ್ಟಂಟ್ ಮರುಸೃಷ್ಟಿಸುವ ಪ್ರಯತ್ನದಲ್ಲಿ ತಾನೇ ನಾಲ್ಕು ಬಾರಿ ಚೂರಿಯಿಂದ ಇರಿತಕ್ಕೆ ಒಳಗಾಗಿದ್ದಾನೆ.

ಸೋಲಂಕಿ ಅವರ ಸ್ನೇಹಿತರು ಮತ್ತು ಕುಟುಂಬದವರು ತಕ್ಷಣ ಶ್ರೀ ಅರಬಿಂದೋ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ಕರೆದೊಯ್ದರು ಬದುಕಿಸಲು ಸಾಧ್ಯವಾಗಿಲ್ಲ.ಸೋಲಂಕಿ  ಘಟನೆ ಕುರಿತು ಪೊಲೀಸರು ಈಗಾಗಲೇ  ತನಿಖೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುತ್ತೂರು: ಕೋಟಿ ಚೆನ್ನಯ ಜೋಡುಕರೆ ಕಂಬಳ | ಕಂಬಳದಿಂದ ಮನೋಸ್ಥೈರ್ಯ ವೃದ್ಧಿಸುತ್ತದೆ | ಕೇಶವ ಪ್ರಸಾದ್‌ ಮುಳಿಯ

ಜೀವ ಉಳಿಸಿದ ಆ್ಯಪಲ್​ ವಾಚ್

ಮಕ್ಕಳಿಗೆ ಬೇಕಿರುವುದು ಭವಿಷ್ಯ ರೂಪಿಸುವ ಶಿಕ್ಷಣ: ಎಚ್‌.ಡಿ.ಕುಮಾರಸ್ವಾಮಿ

ಇಂದು ಬಿ.ಸಿ.ರೋಡ್‌ನಲ್ಲಿ ಯುವಕರ ನಡೆ ಸಾಮರಸ್ಯದ ಕಡೆ ಕಾರ್ಯಕ್ರಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ: ಮಾಜಿ ಶಾಸಕ ರಮಾನಾಥ ರೈ ಮಾಹಿತಿ

ಇತ್ತೀಚಿನ ಸುದ್ದಿ