ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದಿಕ್ಕಿದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್
ಸದ್ಯ ಕಾಶ್ಮೀರ್ ಫೈಲ್ಸ್(Kashmir Files) ಚಿತ್ರ ಬಿಜೆಪಿ ವಲಯದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್(James) ಬಿಡುಗಡೆಯಾಗಿದ್ದು, ಇದೀಗ ರೇಟಿಂಗ್ ನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನೂ ಹಿಂದಿಕ್ಕಿ ಜೇಮ್ಸ್ ಮುನ್ನುಗ್ಗುವ ಮೂಲಕ ಕನ್ನಡದ ಸಿನಿಮಾ ಹಿಂದಿ ಭಾಷೆಯ ಸಿನಿಮಾವನ್ನು ಹಿಂದಿಕ್ಕಿ ಸಾಧನೆ ಮಾಡಿದೆ.
ಕಾಶ್ಮೀರ್ ಫೈಲ್ಸ್ ಚಿತ್ರ 10ರಲ್ಲಿ 8.3 ರೇಟಿಂಗ್ ಪಡೆದುಕೊಂಡಿದೆ. ಜೇಮ್ಸ್ 10ರಲ್ಲಿ 9.9 ರೇಟಿಂಗ್ ಪಡೆದುಕೊಳ್ಳುವ ಮೂಲಕ ಹಿಂದಿ ಸಿನಿಮಾಕ್ಕಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.
ಐಎಂಡಿಬಿ ರೇಟಿಂಗ್ ಗೆ ಸಿನಿಮಾ ವಲಯದಲ್ಲಿ ಹೆಚ್ಚಿನ ಮಹತ್ವವಿದೆ. ಜನರು ನೀಡುವ ವೋಟಿಂಗ್ ಆಧಾರದ ಮೇಲೆ ಈ ರೇಟಿಂಗ್ ನಿರ್ಧಾರವಾಗುತ್ತದೆ. ಒಂದು ವೇಳೆ ಸಿನಿಮಾಕ್ಕೆ ಫೇಕ್ ವೊಟಿಂಗ್ ಅಥವಾ ಹೆಚ್ಚು ರೇಟಿಂಗ್ ಬರಲು ಕೃತಕ ವೋಟಿಂಗ್ ಸೃಷ್ಟಿಸಿದರೆ, ಅದನ್ನು ಬೇರೆ ಮಾನದಂಡಗಳ ಮೂಲಕ ಅಲೆಯಲಾಗುತ್ತದೆ.
ಕಾಶ್ಮೀರ್ ಫೈಲ್ಸ್ ನ ರೇಟಿಂಗ್ ಬಗ್ಗೆ ಅನುಮಾನ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚು ವೋಟಿಂಗ್ ಬಂದರೂ ಬೇರೆ ಮಾನದಂಡಗಳನ್ನು ಗಮನಿಸಲಾಗಿದೆ ಎಂದು ವರದಿಯಾಗಿದೆ.
ವಿವಿಧ ರಾಜ್ಯಗಳ ಚುನಾವಣೆ ಎದುರಿಸಲು ಬಿಜೆಪಿಗೆ ಕಾಶ್ಮೀರ್ ಫೈಲ್ಸ್ ಚಿತ್ರ ವರದಾನವಾಗಿದ್ದು, ಕಾಶ್ಮೀರಿ ಪಂಡಿತರ ಮೇಲೆ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಕಾಲ್ಪನಿಕ ಕಥೆಗಳನ್ನೂ ಹೆಣೆಯಲಾಗಿದೆ ಎನ್ನುವ ಆರೋಪಗಳು ಕೂಡ ಚಿತ್ರದ ಮೇಲಿದೆ. ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಭಾರೀ ಜನಪ್ರಿಯವಾಗಿತ್ತು. ಆದರೆ ಈ ಚಿತ್ರದ ಮೇಲೆ ಅಷ್ಟೇ ಆರೋಪಗಳು ಕೂಡ ಕೇಳಿ ಬಂದಿವೆ.
ಇನ್ನೂ ಪುನೀತ್ ರಾಜ್ ಕುಮಾರ್ ಅವರ ನಟನೆಯ ಕೊನೆಯ ಚಿತ್ರಕ್ಕೆ ರಾಷ್ಟ್ರಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೃದಯವಂತನ ಸಿನಿಮಾಕ್ಕೆ ಜನರು ಹೃದಯಪೂರ್ವಕವಾಗಿ ಶುಭ ಹಾರೈಸಿದ್ದಾರೆ. ಜೊತೆಗೆ ಸೈನಿಕನ ಪಾತ್ರಮಾಡಿರುವ ಅಪ್ಪು, ತಮ್ಮ ಕೊನೆಯ ಚಿತ್ರದಲ್ಲಿ ದೇಶ ಪ್ರೇಮವನ್ನು ಮೆರೆದು ಯುವಕರಿಗೆ ಮಾದರಿಯಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಾನ್-ಆಧಾರ್ ಲಿಂಕ್: ಮಾರ್ಚ್ 31ಕೊನೆ ದಿನಾಂಕ
ಫುಟ್ಬಾಲ್ ಗ್ಯಾಲರಿ ಕುಸಿತ -200ಕ್ಕೂ ಹೆಚ್ಚು ಮಂದಿಗೆ ಗಾಯ
ಕ್ರಿಶ್ಚಿಯನ್ ಪಾದ್ರಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ
ರಾಜ್ಯದಲ್ಲಿ ಇನ್ನೂ ಮುಂದುವರಿಯಲಿದೆ ಬೇಸಿಗೆ ಮಳೆ!
ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್
ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?