ಹಕ್ಕಿಯನ್ನು ಹುಡುಕಲು ಹೋದ ಮಕ್ಕಳು: ಅಮೆಜಾನ್ ಕಾಡಿನಲ್ಲಿ ಸಿಲುಕಿ 27 ದಿನ ಜೀವನ್ಮರಣ ಹೋರಾಟ - Mahanayaka

ಹಕ್ಕಿಯನ್ನು ಹುಡುಕಲು ಹೋದ ಮಕ್ಕಳು: ಅಮೆಜಾನ್ ಕಾಡಿನಲ್ಲಿ ಸಿಲುಕಿ 27 ದಿನ ಜೀವನ್ಮರಣ ಹೋರಾಟ

amazon jungle
21/03/2022

ಅಮೆಜಾನ್ ಮಳೆಕಾಡಿನಲ್ಲಿ ದಾರಿ ತಪ್ಪಿದ  6 ಮತ್ತು 8 ವರ್ಷದ ಇಬ್ಬರು ಮಕ್ಕಳು 27 ದಿನಗಳ ಕಾಲ ಕಾಡಿನಲ್ಲಿಯೇ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

8 ವರ್ಷದ ಗ್ಲೀಸನ್ ಕರ್ವಾಲೊ ರಿಬೇರೊ ಮತ್ತು 6 ವರ್ಷದ ಗ್ಲಾಕೊ ಕರ್ವಾಲೊ ರಿಬೈರೊ ಎಂಬ ಮಕ್ಕಳು ಫೆ.18ರಂದು ಪಕ್ಷಿಯನ್ನು ಹುಡುಕಿ ಕಾಡಿಗೆ ಹೋಗಿದ್ದು, ಕಾಡಿನೊಳಗೆ ಪ್ರವೇಶಿಸಿದ ಬಳಿಕ ದಾರಿ ಸಿಗದೇ ಕಾಡಿನಲ್ಲಿಡೀ ಸುತ್ತಾಡಿದ್ದಾರೆ. ಸುಮಾರು 26 ದಿನಗಳ ಕಾಲ ಕಾಡಿನಲ್ಲಿ ಮಳೆಯ ನೀರು ಕುಡಿಯುತ್ತಾ ಜೀವನ ಸಾಗಿಸಿದ್ದಾರೆ.

ಈ ಮಕ್ಕಳು ಅದೃಷ್ಟವೋ ಏನೋ ಎಂಬಂತೆ ಮಾರ್ಚ್ 15ರಂದು ಅಮೆಜಾನ್ ಕಾಡಿಗೆ ವ್ಯಕ್ತಿಯೋರ್ವ ಮರ ಕಡಿಯಲು ಬಂದಿದ್ದ ವ್ಯಕ್ತಿಗೆ ಈ ಮಕ್ಕಳಿಬ್ಬರು ಸಿಕ್ಕಿದ್ದಾರೆ. ಈ ಇಬ್ಬರು ಮಕ್ಕಳು ಹಸಿದು ಬಳಲಿ ಬೆಂಡಾಗಿ ಮಲಗಿದ್ದರು. ಈ  ದೃಶ್ಯ ಕಂಡ ವ್ಯಕ್ತಿ ತಕ್ಷಣವೇ ಹೊರ ಜಗತ್ತಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ತಕ್ಷಣವೇ ಕಾಡಿಗೆ ತಜ್ಞರ ಸಹಿತ ತೆರಳಿದ ತಂಡ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿ ಅಮೆಜಾನ್‌ನ ರಾಜಧಾನಿ ಮನೌಸ್‌ ಗೆ ಕರೆದೊಯ್ಯಲಾಗಿದೆ.

ಮಕ್ಕಳು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರು ದೂರು ನೀಡಿದ್ದರು. ಇದರನ್ವಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ತೀವ್ರವಾಗಿ ಹುಡುಕಾಡ ನಡೆಸಿದರೂ ಮಕ್ಕಳು ಪತ್ತೆಯಾಗಿರಲಿಲ್ಲ. ಇದೀಗ ಕೊನೆಗೂ ಮಕ್ಕಳು ಸುರಕ್ಷಿಯವಾಗಿ ಮರಳಿದ್ದಾರೆ.

ಈ ಮಕ್ಕಳು ಅಮೆಜಾನ್‌ ನ ಸ್ಥಳೀಯ ಪಾಲ್ಮೇರಾ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಸತತ 27 ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದರಿಂದಾಗಿ ಮಕ್ಕಳು ತೀವ್ರವಾಗಿ ಬಳಲಿದ್ದರು. ಅವರ ದೇಹವು ಅಸ್ಥಿ ಪಂಜರಕ್ಕೆ ಅಂಟಿಕೊಂಡ ಚರ್ಮದಂತೆ ಬದಲಾಗಿತ್ತು. ಇದೀಗ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಖ್ಯಾತ ಜ್ಯೋತಿಷಿಯ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ

ರಸ್ತೆದಾಡುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆದ ಬಿಬಿಎಂಪಿ ಕಸದ ಲಾರಿ: ಶಾಲಾ ಬಾಲಕಿ ಸಾವು

133 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನ ಪತನ

ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಮೂವರ ದುರ್ಮರಣ

ಭೀಕರ ಅಪಘಾತ ಖ್ಯಾತ ನಟಿ ಡಾಲಿ ಡಿಕ್ರೂಜ್ ಸೇರಿದಂತೆ ಮೂವರ ದಾರುಣ ಸಾವು!

ಇತ್ತೀಚಿನ ಸುದ್ದಿ