ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಎನ್‌ಐಎ ತನಿಖೆ ಗೆ - Mahanayaka
1:20 PM Thursday 19 - September 2024

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಎನ್‌ಐಎ ತನಿಖೆ ಗೆ

harsha 1
24/03/2022

ಶಿವಮೊಗ್ಗ: ಶಿವಮೊಗ್ಗದ ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ಎನ್‌ ಐಎ ತನಿಖೆಗೆ ವಹಿಸಿದೆ.

ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಸುಪರ್ದಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು.

ಎನ್‌ ಐಎ ಯು ನಂಬಿಕಸ್ಥ ಏಜೆನ್ಸಿಯಾಗಿದ್ದು, ಎನ್‌ ಐಎ ತನಿಖೆಗೊಪ್ಪಿಸಿದರೆ ಹರ್ಷ ಕುಟುಂಬಸ್ಥರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯು ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿದೆ. ರಾಷ್ಟ್ರೀಯ ತನಿಖಾ ದಳವು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದು, ಶೀಘ್ರ ತನಿಖೆ ಮುಂದುವರಿಯಲಿದೆ.


Provided by

ಹಿಂದೂ ಕಾರ್ಯಕರ್ತ ಹರ್ಷನನ್ನು ದುಷ್ಕರ್ಮಿಗಳು ಫೆ. 20ರಂದು ಕೊಲೆ ನಡೆಸಿದ್ದರು. ಈ ಪ್ರಕರಣವು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದಲ್ಲದೆ, ಅಲ್ಲದೆ, ಶಿವಮೊಗ್ಗ ಬಂದ್ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಹಿಂದೂಪರ ಸಂಘಟನೆಗಳು, ಜನಸಾಮಾನ್ಯರು ಆರೋಪಿಗಳ ಶೀಘ್ರ ಪತ್ತೆಗಾಗಿ ಒತ್ತಾಯಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುಟಿನ್ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆ

ಅಧಿಕಾರ ದುರುಪಯೋಗ: ಎಂ.ಪಿ.ರೇಣುಕಾಚಾರ್ಯ ತನ್ನ ಇಬ್ಬರು ಮಕ್ಕಳಿಗೂ ಎಸ್​ಸಿ ಜಾತಿ ಪ್ರಮಾಣಪತ್ರ ಕೊಡಿಸಿದ್ದಾರೆ; ಕಾಂಗ್ರೆಸ್ ವಕ್ತಾರ ಆರೊಪ

ಹಿಜಾಬ್ ನಿಷೇಧ ಪ್ರಕರಣ: ತುರ್ತು ಮನವಿ ಆಲಿಸಲು ಸುಪ್ರೀಂ ಕೋರ್ಟ್ ನಕಾರ

ಬೈಕ್‌ಗೆ ಬಸ್ ಡಿಕ್ಕಿ: ಸ್ಥಳದಲ್ಲೇ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ಇತ್ತೀಚಿನ ಸುದ್ದಿ