ಅಘಾತಕಾರಿ ಘಟನೆ: ಸರಕು ಸಾಗಣೆ ಹಡಗಿನಿಂದ ನದಿಗೆ ಬಿದ್ದ12 ಟ್ರಕ್‌; 10ಕ್ಕೂ ಹೆಚ್ಚು ಮಂದಿ ಸಾವು - Mahanayaka
11:09 PM Wednesday 11 - December 2024

ಅಘಾತಕಾರಿ ಘಟನೆ: ಸರಕು ಸಾಗಣೆ ಹಡಗಿನಿಂದ ನದಿಗೆ ಬಿದ್ದ12 ಟ್ರಕ್‌; 10ಕ್ಕೂ ಹೆಚ್ಚು ಮಂದಿ ಸಾವು

truck
25/03/2022

ಜಾರ್ಖಂಡ್‌: ಸರಕು ಸಾಗಣೆ ಹಡಗಿನಲ್ಲಿ ಸಾಗಿಸುತ್ತಿದ್ದ 12 ಟ್ರಕ್‌ಗಳು ಗಂಗಾ ನದಿಯಲ್ಲಿ ಉರುಳಿ ಬಿದ್ದು 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ರಾತ್ರಿ ವೇಳೆ ಸರಕು ಸಾಗಣೆ ಹಡಗು ನಡೆಸುವುದು ಕಾನೂನು ಬಾಹಿರವಾಗಿದೆ. ನಿಯಮದ ವಿರುದ್ಧವಾಗಿ ಜಾರ್ಖಂಡ್‌ನ ಸಾಹೇಬ್‌ಗಂಜ್‌ನಿಂದ ಬಿಹಾರದ ಮಣಿಹಾರಿಗೆ ನಡುವೆ ಸಾಗುತ್ತಿದ್ದ ಕಾರ್ಗೋ ಸರಕು ಹಡಗಿನಿಂದ 12 ಟ್ರಕ್‌ಗಳು ಗಂಗಾ ನದಿಯಲ್ಲಿ ಉರುಳಿ ಬಿದ್ದಿದೆ.

ಈ ಘಟನೆಯಲ್ಲಿ ಹತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ದುರಂತದ ಹತ್ತಿರದ ಸ್ಥಳವಾದ ಮುಕ್ತೇಶ್ವರ ಗಂಗಾ ಘಾಟ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಮ್ ನಿವಾಸ್ ಯಾದವ್ ಮಾಹಿತಿ ನೀಡಿದ್ದಾರೆ.

ಹಡಗಿನಲ್ಲಿ ಲೋಡ್ ಮಾಡಿದ 18 ಟ್ರಕ್‌ಗಳಿದ್ದು, ಒಂದು ಟ್ರಕ್‌ನ ಟೈರ್‌ ಒಡೆದು ವಾಲಿಕೊಂಡು ನದಿಯಲ್ಲಿ ಮುಳುಗಿದೆ. ಸ್ಟೀಮರ್ ಅಸಮತೋಲನಗೊಂಡಿದ್ದರಿಂದ, ಹೆಚ್ಚಿನ ಟ್ರಕ್‌ಗಳು ನದಿಯಲ್ಲಿ ಮುಳುಗಡೆಯಾಯಿತು ಎಂದು ಹಡಗಿನ ಕ್ಯಾಪ್ಟನ್ ಅಮರ್ ಚೌಧರಿ ಘಟನೆ ಕುರಿತು ವಿವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯ ಮುಂದುವರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದ್ವೇಷ, ಹಿಂಸಾಚಾರ ಹುಟ್ಟುಹಾಕುವ ಉದ್ದೇಶ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಹಿಂದಿದೆ: ಸೀತಾರಾಮ್ ಯೆಚೂರಿ

ಭಯೋತ್ಪಾದಕರ ಹೆಸರಲ್ಲಿ ಸೈನಿಕರನ್ನು ಬಿಜೆಪಿ ಕೊಂದಿದೆ: ಶಿವರಾಜ್ ತಂಗಡಗಿ

ಮಾತುಬಾರದ ಬಾಲಕನ ಹತ್ಯೆ: ಗೋಣಿ ಚೀಲದಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು

ಸಿಮೆಂಟ್ ಲಾರಿಗಳ ನಡುವೆ ಭೀಕರ ಅಪಘಾತ: ಚಾಲಕ ಸಜೀವ ದಹನ

ಇತ್ತೀಚಿನ ಸುದ್ದಿ