'RRR' ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಅಭಿಮಾನಿಗಳಿಗೆ ದುಃಖದ ಸುದ್ದಿ! - Mahanayaka
9:29 AM Wednesday 5 - February 2025

‘RRR’ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವೆಯೇ ಅಭಿಮಾನಿಗಳಿಗೆ ದುಃಖದ ಸುದ್ದಿ!

rrr
25/03/2022

ಆಂಧ್ರಪ್ರದೇಶ: ರಾಜಮೌಳಿ ಅವರ ಹೊಸ ಚಿತ್ರ ‘RRR’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ದುಃಖದ ಸುದ್ದಿಯೊಂದು ದೊರಕಿದ್ದು, ಚಿತ್ರ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಆಂಧ್ರಪ್ರದೇಶದ ಅನಂತಪುರ ಎಸ್‌ ವಿ ಮ್ಯಾಕ್ಸ್‌ ನಲ್ಲಿ ಈ ಘಟನೆ ನಡೆದಿದೆ.  RRR ಚಿತ್ರ ಪ್ರದರ್ಶನವಾಗುತ್ತಿದ್ದಂತೆಯೇ 30 ವರ್ಷ ವಯಸ್ಸಿನ ಯುವಕನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

RRR ಚಿತ್ರ ವಿಶ್ವದಾದ್ಯಂತ 10 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿಯೇ ಸುಮಾರು 1500 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ರಾಜಮೌಳಿ ಅವರ ಹೊಸ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಕೂಡ ನಟಿಸಿದ್ದಾರೆ.

ಚಿತ್ರವು 1920ರ ದಶಕದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಥೆಯನ್ನು ಹೇಳುತ್ತಿದೆ.  ಕಥೆ ಕೇವಲ ಕಾಲ್ಪನಿಕ,  ಬಯೋಪಿಕ್ ಅಲ್ಲ.  ಕೇವಲ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರನ್ನು ಇತಿಹಾಸದಿಂದ ತೆಗೆದುಕೊಳ್ಳಲಾಗಿದೆ.  ಅವರ ಜೀವನದಲ್ಲಿ ಕೆಲವು ಆಸಕ್ತಿದಾಯಕ ಕಾಕತಾಳೀಯಗಳಿವೆ.  ಅದನ್ನೇ ತಮ್ಮ ಚಿತ್ರಕ್ಕೆ ತೆಗೆದುಕೊಂಡೆ ಎಂದು ರಾಜಮೌಳಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಲಯಾಳಂ ನಟ ಸುರೇಶ್ ಗೋಪಿಯ ವಿಚಿತ್ರ ಗಡ್ಡ ನೋಡಿ ವೆಂಕಯ್ಯ ನಾಯ್ಡು ಕೇಳಿದ್ದೇನು?  | ವಿಡಿಯೋ ವೈರಲ್

ಪ್ರೇಯಸಿಯ ನಗ್ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ

ಚಲಿಸುತ್ತಿದ್ದ ಬಸ್ಸಿನಲ್ಲಿ ಬಿಯರ್ ಕುಡಿದು ಡಾನ್ಸ್ ಮಾಡಿದ ವಿದ್ಯಾರ್ಥಿಗಳು!: ವಿಡಿಯೋ ವೈರಲ್

ಅರವಿಂದ್ ಕೇಜ್ರಿವಾಲ್‌ ‘ಅರ್ಬನ್‌ ನಕ್ಸಲ್‌’: ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ

ಪತಿಯನ್ನು ಮರಕ್ಕೆ ಕಟ್ಟಿ, ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ

 

ಇತ್ತೀಚಿನ ಸುದ್ದಿ