ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ
ನಟ ಸಂಚಾರಿ ವಿಜಯ್(Sanchari Vijay) ಅವರ ಮುಂದಿನ ಚಿತ್ರ ತಲೆದಂಡ(Taledanda Kannada Movie)ವನ್ನು ಎಲ್ಲರೂ ವೀಕ್ಷಿಸುವಂತೆ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ(Mammootty) ಕರೆ ನೀಡಿದ್ದು, ನಾನು ಸಂಚಾರಿ ವಿಜಯ್ ಅವರ ಮುಂದಿನ ಸಿನಿಮಾವನ್ನು ನೋಡುವ ಮೂಲಕ ಅವರ ಪ್ರತಿಭೆಯನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಮಮ್ಮುಟ್ಟಿ ಹೇಳಿದ್ದಾರೆ.
ನಾನು ಮತ್ತು ಸಂಚಾರಿ ವಿಜಯ್ ಹೈದರಾಬಾದ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯಾದೆವು. ಅವರು ನನ್ನನ್ನು ಕಂಡು ಮಾತನಾಡಿಸಿ, ನಾನು ನಿಮ್ಮ ಅಭಿಮಾನಿ ಎಂದು ಹೇಳಿದಾಗ ನಾನು ನಿಜವಾಗಿಯೂ ವಿನಮ್ರನಾಗಿದ್ದೆ ಎಂದು ಮಮ್ಮುಟ್ಟಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನನ್ನ ಮುಂದಿನ ಸಿನಿಮಾವನ್ನು ನೀವು ನೋಡಬೇಕು ಎಂದು ಸಂಚಾರಿ ವಿಜಯ್ ಅವರು ನನ್ನ ಬಳಿ ಹೇಳಿದರು. ನನಗೆ ಆಗ ಗೊತ್ತಿರಲಿಲ್ಲ, ಅದು ಅವರ ಕೊನೆಯ ಆಸೆ ಎಂದು. ಅವರ ಕೊನೆಯ ಚಿತ್ರ “ತಲೆದಂಡ”ವನ್ನು ಚಿತ್ರಮಂದಿರಗಳಿಗೆ ತೆರಳಿ ನೋಡೋಣ. ಅವರ ಚಿತ್ರವನ್ನು ವೀಕ್ಷಿಸುವ ಮೂಲಕ ಅವರ ಸ್ಮರಣೆ ಮಾಡೋಣ ಎಂದು ಮಮ್ಮುಟ್ಟಿ ಹೇಳಿದರು.
ಅವರ ಕಠಿಣ ಪರಿಶ್ರಮ, ಪ್ರತಿಭೆಯನ್ನು ನಾನು ಖಂಡಿತವಾಗಿಯೂ ನೋಡುತ್ತೇನೆ ಎನ್ನುವ ಖಾತ್ರಿ ನನಗಿದೆ ಎಂದು ಮಮ್ಮುಟ್ಟಿ ಹೇಳಿದ್ದು, “ತಲೆದಂಡ” ಚಿತ್ರವನ್ನು ಎಲ್ಲರೂ ವೀಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ: ಕೊಲ್ಲೂರು ದೇವಾಲಯಕ್ಕೆ ಮನವಿ
8 ವರ್ಷದ ಬಾಲಕಿಯ ತಲೆ ಕತ್ತರಿಸಿ ರುಂಡದೊಂದಿಗೆ ಗ್ರಾಮದಲ್ಲಿ ತಿರುಗಾಡಿದ ಆರೋಪಿಯ ಬಂಧನ
ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ!
ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು: ಉಡುಪಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಹೊಟೇಲ್ ತೆರವು
ಅರವಿಂದ್ ಕೇಜ್ರಿವಾಲ್ ‘ಅರ್ಬನ್ ನಕ್ಸಲ್’: ಬಿಜೆಪಿ ಮುಖಂಡ ಅಮಿತ್ ಮಾಳವಿಯಾ