ಮಗಳ ಮೃತದೇಹವನ್ನು ಹೊತ್ತು 10 ಕಿ.ಮೀ. ನಡೆದ ತಂದೆ - Mahanayaka
6:10 AM Friday 20 - September 2024

ಮಗಳ ಮೃತದೇಹವನ್ನು ಹೊತ್ತು 10 ಕಿ.ಮೀ. ನಡೆದ ತಂದೆ

eshwra das
26/03/2022

ಛತ್ತೀಸ್ ಗಢ: ಆಸ್ಪತ್ರೆಯಲ್ಲಿ ಮೃತಪಟ್ಟ ಮಗಳ ಮೃತದೇಹವನ್ನು ತಂದೆ ಹೆಗಲ ಮೇಲೆ ಹೊತ್ತು ಮನೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ಲಖನ್ ಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ಆಕೆಯ ತಂದೆ ಈಶ್ವರ್ ದಾಸ್ ಹೆಗಲ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಮನೆಗೆ ಸಾಗಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ‘ಮಗುವಿಗೆ ಕೆಲವು ದಿನಗಳಿಂದ ಆಮ್ಲಜನಕದ ಪ್ರಮಾಣ ತೀರಾ ಕಡಿಮೆಯಾಗಿದ್ದು, ಕೆಮ್ಮು ಕೂಡ ಇತ್ತು, ಅಗತ್ಯ ಚಿಕಿತ್ಸೆ ನೀಡಲಾದರೂ ಗುರುವಾರ ಬೆಳಗ್ಗೆ 7:30ಕ್ಕೆ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.


Provided by

ಮೃತದೇಹವನ್ನು ಮನೆಗೆ ತಲುಪಿಸಲು ಶವಪೆಟ್ಟಿಗೆ ಶೀಘ್ರದಲ್ಲೇ ಬರಲಿದೆ ಎಂದು ಕುಟುಂಬದವರಿಗೆ ತಿಳಿಸಿದ್ದರು. ಆದರೆ, ಶವಪೆಟ್ಟಿಗೆ ಬರುವುದನ್ನು ಕಾಯದೆ ಮೃತ ಬಾಲಕಿಯ ತಂದೆ ಈಶ್ವರ್ ದಾಸ್ ಆಕೆಯ ಮೃತದೇಹವನ್ನು ಹೊತ್ತು ಸುಮಾರು 10 ಕಿ.ಮೀ ದೂರ ಕ್ರಮಿಸಿದ್ದಾರೆ ಎಂದು ಗ್ರಾಮೀಣ ವೈದ್ಯಕೀಯ ಸಹಾಯಕ ಡಾ.ವಿನೋದ್ ಭಾರ್ಗವ್ ಹೇಳಿದರು.

ಸುಮಾರು 10 ಕಿ.ಮೀ ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗಿದ ಈಶ್ವರ್ ದಾಸ್ ಅವರ ವೀಡಿಯೊವನ್ನು ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ದೇವ್ ಅವರು ಕ್ರಮಕ್ಕೆ ಆದೇಶ ನೀಡಿದ್ದರು.

ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ವಾಹನ ಬರುವವರೆಗೆ ಕಾಯುವಂತೆ ಕುಟುಂಬಸ್ಥರ ಮನವೊಲಿಸಬೇಕು. ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕಿತ್ತು,” ಎಂದು ಸಚಿವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ

ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ: ಕೊಲ್ಲೂರು ದೇವಾಲಯಕ್ಕೆ ಮನವಿ

8 ವರ್ಷದ ಬಾಲಕಿಯ ತಲೆ ಕತ್ತರಿಸಿ ರುಂಡದೊಂದಿಗೆ ಗ್ರಾಮದಲ್ಲಿ ತಿರುಗಾಡಿದ ಆರೋಪಿಯ ಬಂಧನ

ಗಡಿ ವಿವಾದ: ಸಿಎಂ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಲ್ಲಿ ಖಂಡನಾ ನಿರ್ಣಯ

ಪಾವಗಡ ಬಸ್ ಅಪಘಾತ ಪ್ರಕರಣ: 7ಕ್ಕೆ ಏರಿಕೆಯಾದ ಮೃತರ ಸಂಖ್ಯೆ

 

ಇತ್ತೀಚಿನ ಸುದ್ದಿ