ನವಜಾತ ಶಿಶುವಿನ ಮೃತದೇಹವನ್ನು ಹೊಲದಲ್ಲಿ ಎಸೆದು ಹೋದ ಪಾಪಿಗಳು!
ಮಂಡ್ಯ: ನವಜಾತ ಗಂಡು ಶಿಶುವಿನ ಮೃತದೇಹವನ್ನು ಹೊಲದಲ್ಲಿ ಎಸೆದು ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಬಸರಾಳು ತಾಲೂಕಿನ ಬಿದರಕಟ್ಟೆ ಎಂಬಲ್ಲಿ ನಡೆದಿದೆ.
ನವಜಾತ ಶಿಶು ಜನಿಸಿ ಕೆಲವು ಗಂಟೆ ಕಳೆದಿದ್ದು, ನಂತರ ನವಜಾತ ಶಿಶುವಿನ ಶವವನ್ನು ಯಾರೋ ರಸ್ತೆಬದಿಗೆ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದೆ.
ಬೆಳಗ್ಗೆ ರಸ್ತೆಯಲ್ಲಿ ಸಂಚರಿಸುವವರು ಶಿಶುವಿನ ಮೃತದೇಹವನ್ನು ಗಮನಿಸಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದ್ದು, ಇದರಿಂದಾಗಿ ಘಟನೆಯು ಬೆಳಕಿಗೆ ಬಂದಿದೆ. ಕೃತ್ಯ ಎಸಗಿರುವವರು ಹೊರ ಜಿಲ್ಲೆಯವರು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಸದ್ಯ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಗಳ ಮೃತದೇಹವನ್ನು ಹೊತ್ತು 10 ಕಿ.ಮೀ. ನಡೆದ ತಂದೆ
ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ
ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ: ಕೊಲ್ಲೂರು ದೇವಾಲಯಕ್ಕೆ ಮನವಿ
8 ವರ್ಷದ ಬಾಲಕಿಯ ತಲೆ ಕತ್ತರಿಸಿ ರುಂಡದೊಂದಿಗೆ ಗ್ರಾಮದಲ್ಲಿ ತಿರುಗಾಡಿದ ಆರೋಪಿಯ ಬಂಧನ
ಗಡಿ ವಿವಾದ: ಸಿಎಂ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಲ್ಲಿ ಖಂಡನಾ ನಿರ್ಣಯ