ಬಿರ್ಭೂಮ್ ಹಿಂಸಾಚಾರ: ಘಟನಾ ಸ್ಥಳದಲ್ಲಿ ಮತ್ತೆ 40 ಕಚ್ಚಾ ಬಾಂಬ್‌ ಗಳು ಪತ್ತೆ - Mahanayaka
9:43 PM Thursday 19 - September 2024

ಬಿರ್ಭೂಮ್ ಹಿಂಸಾಚಾರ: ಘಟನಾ ಸ್ಥಳದಲ್ಲಿ ಮತ್ತೆ 40 ಕಚ್ಚಾ ಬಾಂಬ್‌ ಗಳು ಪತ್ತೆ

birbum1
27/03/2022

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಹಿಂಸಾಚಾರ ನಡೆದ ಸ್ಥಳದಲ್ಲಿ ಮತ್ತೆ 40 ಕಚ್ಚಾ ಬಾಂಬ್‌ಗಳು ಪತ್ತೆಯಾಗಿದೆ. ಈ ಎಲ್ಲಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ.

ಟಿಎಂಸಿ ಮುಖಂಡನ ಹತ್ಯೆಗೆ ಪ್ರತೀಕಾರವಾಗಿ ಗುಂಪೊಂದು ವಿರುದ್ಧ ಗುಂಪಿನ ಮನೆಗಳ ಮೇಲೆ ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳು ಸೇರಿ ಎಂಟು ಮಂದಿಯನ್ನು ಥಳಿಸಿ ಸಜೀವದಹನಗೊಳಿಸಿತ್ತು.

ಅಲ್ಲದೆ ಬಿರ್ಭೂಮ್‌ ಘಟನೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಘಟನೆಯ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರಕಾರ ಪೊಲೀಸರಿಗೆ ಆದೇಶಿಸಿತ್ತು.


Provided by

ಪರಿಶೀಲನೆ ವೇಳೆ ಹಿಂಸೆ ನಡೆದ ಸ್ಥಳದಲ್ಲಿ ಶನಿವಾರ ಮತ್ತೆ 40 ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಭಾಗದಲ್ಲಿ ನಾಲ್ಕು ಬಕೆಟ್‌ಗಳಲ್ಲಿ ಈ ಬಾಂಬ್ ಗಳನ್ನು ಮುಚ್ಚಿಡಲಾಗಿತ್ತು ಎಂದು ಬಿರ್ಭಮ್ ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ನಾಥ್ ತ್ರಿಪಾಠಿ ತಿಳಿಸಿದ್ದಾರೆ.

ಬಿರ್ಭೂಮ್ ಹಿಂಸಾಚಾರ ಘಟನೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ವಹಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಸಚಿವ ಬಿ.ಸಿ ನಾಗೇಶ್

ದಿ ಕಾಶ್ಮೀರ್ ಫೈಲ್ ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು

ಸವದತ್ತಿ ಯಲ್ಲಮ್ಮ ದೇವಸ್ಥಾನ ಬಳಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪ್ರಮೋದ್ ಮುತಾಲಿಕ್ ಮನವಿ

ಕಿಡಿಗೇಡಿಗಳಿಂದ ಜೋಗಿಮಟ್ಟಿ ಗಿರಿಧಾಮಕ್ಕೆ ಬೆಂಕಿ: ಅಪಾರ ಔಷಧಿ ಸಸಿಗಳು ನಾಶ

ಇತ್ತೀಚಿನ ಸುದ್ದಿ