ಗ್ರಾಮಪಂಚಾಯತ್ ಚುನಾವಣಾ ದಿನಾಂಕ ಘೋಷಣೆ | 2 ಹಂತದಲ್ಲಿ ಚುನಾವಣೆ ಘೋಷಣೆ
ಬೆಂಗಳೂರು: ರಾಜ್ಯದ 5,764 ಗ್ರಾಮಪಂಚಾಯತ್ ಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಡಿಸೆಂಬರ್ 22ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ ಎಂದು ವರದಿಯಾಗಿದೆ.
ರಾಜ್ಯದ 5764 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಿಗದಿ ಪಡಿಸಲಾಗಿದೆ. ಮೊದಲ ಹಂತದ ಚುನಾವಣೆಗೆ ಅಧಿಸೂಚನೆ 7-11-2020ರಿಂದ ಆರಂಭಗೊಂಡರೇ ಎರಡನೇ ಹಂತದಲ್ಲಿ 11-11-2020ರಿಂದ ಆರಂಭಗೊಳ್ಳಲಿದೆ.
ಮೊದಲ ಹಂತದ ಗ್ರಾಮಪಂಚಾಯ್ತಿ ಚುನಾವಣೆಗೆ ಮತದಾನ ದಿನಾಂಕ 22-12-2020ರಂದು ನಡೆಯಲಿದೆ. ದಿನಾಂಕ 27-12-2020ರಂದು ಎರಡನೇ ಹಂತದ ಗ್ರಾಮ ಪಂಚಾಯ್ತಿಗಳಿಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥರು ನಡೆಸಿರುವ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
ಕೊರೊನಾ ಹಿನ್ನೆಲೆಲ್ಲಿ ಒಂದು ಸಾವಿರ ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗುವುದು. ಮತ್ತು ಕೊವಿಡ್ 19 ನಿಯಂತ್ರಣ ಮಾರ್ಗಸೂಚಿಯ ಪ್ರಕಾರವೇ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಸ್ಥರು ತಿಳಿಸಿದರು.