ಸಕ್ಕರೆ ಕಾಯಿಲೆ ಇದ್ದವರು ಈ ಹಣ್ಣನ್ನು ತಪ್ಪದೇ ಸೇವಿಸಿ - Mahanayaka
11:27 AM Saturday 14 - December 2024

ಸಕ್ಕರೆ ಕಾಯಿಲೆ ಇದ್ದವರು ಈ ಹಣ್ಣನ್ನು ತಪ್ಪದೇ ಸೇವಿಸಿ

16/10/2020

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಬಂದರೆ ಮನುಷ್ಯನಿಗೆ ಒಂದಲ್ಲ ಒಂದು ಸಂಕಷ್ಟಗಳು ಕಾಡುತ್ತಲೇ ಇರುತ್ತವೆ. ರಕ್ತದಲ್ಲಿ ಸಕ್ಕರೆಯ ಅಂಶ ಏರುಪೇರಾಗಿ ನಾನಾ ರೀತಿಯ ಸಮಸ್ಯೆಗಳಿಗೆ ಮಧುಮೇಹಿಗಳು ಕಾರಣರಾಗುತ್ತಾರೆ. ಆದರೆ, ಮಧುಮೇಹಿಗಳಿಗೆ ಮಿತ್ರನಂತೆ ಕೆಲಸ ಮಾಡುವ ಒಂದು ಹಣ್ಣಿದೆ. ಈ ಹಣ್ಣನ್ನು ಸೇವಿಸಿದರೆ, ಮಧುಮೇಹಿಗಳು ಸ್ವಲ್ಪ ನಿರಾಳವಾಗಿರಬಹುದಂತೆ.

ಹೌದು..! ನೇರಳೆ ಹಣ್ಣನ್ನು ಸೇವಿಸಿದರೆ, ಮಾನವನ ರಕ್ತದಲ್ಲಿರುವ ಸಕ್ಕರೆಯ ಅಂಶ ನಿಯಂತ್ರಣದಲ್ಲಿರುತ್ತದೆಯಂತೆ! ನೇರಳೆ ಹಣ್ಣನ್ನು ಸೇವಿಸುವ ಮೂಲಕ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದಾಗಿದೆ.

ಇನ್ನೂ ನೇರಳೆ ಹಣ್ಣನ್ನು ಬೇಕಾಬಿಟ್ಟಿ ಸೇವಿಸಬಹುದೇ ಎಂದು ಪ್ರಶ್ನೆಗಳು ಬಂದರೆ, ನೇರಳೆ ಹಣ್ಣನ್ನು ನೀವು ಯಾವುದೇ ಸಮಯದಲ್ಲಿ ಸೇವಿಸ ಬಹುದು ಎನ್ನುವ ಉತ್ತರಗಳೇ ದೊರಕುತ್ತಿವೆ. ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವ ಶಕ್ತಿ ನೇರಳೆ ಹಣ್ಣಿಗಿರುವುದರಿಂದ ಈ ಬಗ್ಗೆ ಭಯಬೇಡ ಎಂದೇ ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ