ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಕೇಕ್ ಗೆ ಗಾಂಜಾ ಬೆರೆಸಿದ ಅಣ್ಣ!
ನ್ಯೂಯಾರ್ಕ್: ಸ್ನೇಹಿತರ ಮದುವೆಯ ದಿನ ವಿಪರೀತ ತಮಾಷೆಗಳು ನಡೆಯುವುದು ಸಾಮಾನ್ಯವಾಗಿದೆ. ಹಲವೆಡೆ ಇಂತಹ ತಮಾಷೆಗಳು ಅತಿರೇಕಕ್ಕೆ ಏರಿ ಜಗಳ ನಡೆಯುವುದು ಸಾಮಾನ್ಯ. ಇದೇ ರೀತಿ ಇಲ್ಲೊಬ್ಬ ವಧುವಿನ ಸಹೋದರ ಮದುವೆಯ ಅತಿಥಿಗಳಿಗೆ ಗಾಂಜಾ(Ganja) ಬೆರೆತ ಕೇಕ್ ನೀಡುವ ಮೂಲಕ ಸುದ್ದಿಯಾಗಿದ್ದಾನೆ.
ಚಿಲಿ(Chile)ಯಲ್ಲಿ ಈ ಘಟನೆ ನಡೆದಿದ್ದು ಸ್ಯಾಂಟಿಯಾಗೊದ 29 ವರ್ಷದ ಅಲ್ವಾರೊ ರೊಡ್ರಿಗಸ್ ತನ್ನ ಸಹೋದರಿಯ ಮದುವೆಗಾಗಿ ಏಳು ಅಂತಸ್ತಿನ ವಿಶೇಷ ಕೇಕ್ ತಯಾರು ಮಾಡಿದ್ದು, ಕೇಕ್‌ನ ಏಳು ಮಹಡಿಯ ಒಂದರಲ್ಲಿ ಗಾಂಜಾವನ್ನು ಬೆರೆಸಿದ್ದ.
ಅಲ್ವಾರೊ ರೊಡ್ರಿಗಸ್(Alvaro Rodriguez) ಈ ಕೇಕ್ ತಯಾರಿಸಲು ಇಪ್ಪತ್ತು ಗಂಟೆ ಕಾಲಾವಕಾಶ ತೆಗೆದುಕೊಂಡಿದ್ದಾನೆ. ಇನ್ನೂ ಗಾಂಜಾ ಬಳಸಿ ಕೇಕ್ ತಯಾರಿಸಿರುವ ಸುದ್ದಿ ಹರಿದಾಡುತ್ತಿದ್ದಂತೆಯೇ ಕೇಕ್ ವಯಸ್ಕರಿಗೆ ಮಾತ್ರ ನೀಡಲಾಗಿತ್ತು ಎಂದು ಅಲ್ವಾರೊ ಸ್ಪಷ್ಟಪಡಿಸಿದ್ದಾನೆ.
ವಿದೇಶದಲ್ಲಿ ಇಂತಹದ್ದೆಲ್ಲ ಚಿತ್ರ ವಿಚಿತ್ರ ಘಟನೆಗಳು ಸಾಮಾನ್ಯ ಎಂಬಂತೆ ನಡೆಯುತ್ತಲೇ ಇರುತ್ತದೆ. ಆದರೆ ಇಂತಹ ವಿನೋದಗಳು ನಮ್ಮ ದೇಶದಲ್ಲಿ ಕ್ರೈಮ್ ಆಗಿದೆ. ಯಾವುದೇ ಮಾದಕ ವಸ್ತುಗಳು ವಿನೋದಕ್ಕಾಗಿ ಆರಂಭವಾಗುತ್ತದೆ. ಅದು ಚಟವಾಗಿ ಬದಲಾದಾಗ ಅದರ ನಿಜ ರೂಪ ಏನು ಎನ್ನುವುದು ತಿಳಿಯುತ್ತದೆ. ಯುವ ಸಮೂಹ ಮತ್ತಿನಿಂದ ಹೊರ ಬಂದು ನಿಜವಾದ ಪ್ರಪಂಚವನ್ನು ನೋಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಐಪಿಎಲ್ ಗೆ ಅತೀ ಹೆಚ್ಚು ವೀಕ್ಷಕರು ಇರುವ ರಾಜ್ಯ ಯಾವುದು?
ತೀರ್ಥ ಯಾತ್ರೆಯ ನೆಪದಲ್ಲಿ ಗಾಂಜಾ ಸಾಗಾಟ: ದಂಪತಿ ಸೇರಿದಂತೆ ನಾಲ್ವರು ಅರೆಸ್ಟ್