ಬೈಕ್, ಕಾರು ನಡುವೆ ಅಪಘಾತ: ತಾಯಿ ಮಗನಿಗೆ ಗಂಭೀರ ಗಾಯ
ರಾಮಕುಂಜ: ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ತಾಯಿ ಹಾಗೂ ಮಗ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲದಲ್ಲಿ ನಡೆದಿದೆ.
ಆತೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ಬೈಕ್ ಹಾಗೂ ಉಪ್ಪಿನಂಗಡಿಯಿಂದ ಆತೂರು ಕಡೆಗೆ ಬರುತ್ತಿದ್ದ ಕಾರು ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲದಲ್ಲಿ ಹಾಲಿನ ಸೊಸೈಟಿಯ ಮುಂಭಾಗದಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ.
ಇನ್ನು ಘಟನೆಯಲ್ಲಿ ಬೈಕ್ ಸವಾರ ಸುಣ್ಣಾಲ ನಿವಾಸಿ ನಂದಕಿಶೋರ್ ಹಾಗೂ ಬೈಕ್‌ನ ಸಹ ಸವಾರೆ ನಂದಕಿಶೋರ್‌ರವರ ತಾಯಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.ಇನ್ನು ಕಾರು ಚಾಲಕಿ ಅಪಾಯದಿಂದ ಪಾರಾಗಿದ್ದು, ಗಾಯಾಳುಗಳು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಕೇಕ್ ಗೆ ಗಾಂಜಾ ಬೆರೆಸಿದ ಅಣ್ಣ!
ಐಪಿಎಲ್ ಗೆ ಅತೀ ಹೆಚ್ಚು ವೀಕ್ಷಕರು ಇರುವ ರಾಜ್ಯ ಯಾವುದು?
ತೀರ್ಥ ಯಾತ್ರೆಯ ನೆಪದಲ್ಲಿ ಗಾಂಜಾ ಸಾಗಾಟ: ದಂಪತಿ ಸೇರಿದಂತೆ ನಾಲ್ವರು ಅರೆಸ್ಟ್