ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಪ್ರಭಾಕರ್ ಭಟ್
ಉಡುಪಿ: ಟಿಪ್ಪು ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವ ಅಪಮಾನ. ಇದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಉಡುಪಿಯ ಬೈಂದೂರಿನಲ್ಲಿ ಮಾಧ್ಯಮಗಳೊಂದಿಗೆ ಶೃಂಗೇರಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುವ ಸಲಾಂ ಆರತಿ ಪೂಜೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಸಲಾಂ ತೆಗೆದು ದೇವರ ಹೆಸರಿನಲ್ಲಿ ಪೂಜೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಟಿಪ್ಪು ನಮ್ಮ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾನೆ. ಹಿಂದೂ ಸಮಾಜವನ್ನು ನಾಶ ಮಾಡಿದ್ದಾನೆ. ಇಂತಹ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ. ಸಲಾಂ ಹೆಸರನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಇಲ್ಲದಿದ್ದರೆ ದೇವರ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಶೀಘ್ರವಾಗಿ ಸಲಾಂ ತೆಗೆದು, ದೇವರ ಹೆಸರಿನಲ್ಲಿ ಪೂಜೆ ಮಾಡಲಿ. ಸಲಾಂ ಇನ್ನೂ ಸ್ವಲ್ಪ ವರ್ಷ ಕಳೆದರೆ, ಅಲ್ಲಾಹು ಸಲಾಂ ಎಂದು ಬರುವ ಸಾಧ್ಯತೆ ಇದೆ. ಅವರಲ್ಲಿ ಬೇಕಾದರೆ ಮಾಡಲಿ, ನಮ್ಮಲ್ಲಿ ಬೇಡ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕು. ಹಿಂದೂ ದೇವರಿಗೆ ಇಂತಹ ಸಲಾಂ ಪೂಜೆ ನಡೆಯಬಾರದು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತ್ತೆ ಪೆಟ್ರೋಲ್ ಡಿಸೇಲ್ ಏರಿಕೆ: ಇಂದು ಏರಿಕೆಯಾಗಿದ್ದು ಎಷ್ಟು?
ಅಕ್ಕನ ಬಾಯ್ಫ್ರೆಂಡ್ನಿಂದ ಬಾಲಕಿ ಮೇಲೆ ಅತ್ಯಾಚಾರ
ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ ಹೇರಲು ಬಿಡುವುದಿಲ್ಲ: ಬಿಜೆಪಿ ಶಾಸಕ ಅನಿಲ್ ಬೆನಕೆ