ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಹತ್ಯೆಗೈದ ಮಗಳು
ಚೆನ್ನೈ: ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಓಡಾಡುತ್ತಿದ್ದುದಕ್ಕೆ ಸದಾ ಬೈಯುತ್ತಿದ್ದ ತಾಯಿಯನ್ನೇ ಕೊಲೆ ಮಾಡಿದ 17 ವರ್ಷದ ಬಾಲಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ಮುನಿಯಲಕ್ಷ್ಮಿ ಮೃತ ಮಹಿಳೆಯಗಿದ್ದಲೆ. ತಮಿಳುನಾಡಿನ ತೂತುಕುಡಿಯಲ್ಲಿ ನೆರೆಹೊರೆಯ ಕೆಲವು ಯುವಕರೊಂದಿಗೆ ತಿರುಗಾಡುತ್ತಿದ್ದ 17 ವರ್ಷದ ಮಗಳಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಆಕೆ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದಳು. ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಆಕೆ ತನ್ನ ಇಬ್ಬರು ಬಾಯ್ಫ್ರೆಂಡ್ಗಳ ಸಹಾಯದಿಂದ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಕೊಲೆಯ ಬಗ್ಗೆ ಪೊಲೀಸರಿಗೆ ಫೋನ್ ಕರೆ ಬಂದಿದ್ದು, ತಕ್ಷಣ ಸ್ಥಳಕ್ಕಾಗಮಿಸಿದಾಗ ಮುನಿಯಲಕ್ಷ್ಮಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಆಕೆಯ 17 ವರ್ಷದ ಮಗಳು ಮೃತದೇಹದ ಪಕ್ಕದಲ್ಲಿ ಕುಳಿತಿದ್ದಳು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
ಬಂಧನ ಭೀತಿ ಎದುರಿಸುತ್ತಿರುವ ಸಚಿವ ಸೋಮಣ್ಣ: ಮಾ.30ರಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಪ್ರಭಾಕರ್ ಭಟ್