ರಂಜಾನ್ ಆರಂಭವಾಗುತ್ತಿದ್ದಂತೆಯೇ ಭಾರೀ ಬೆಲೆಗೆ ಮಾರಾಟವಾದ ಒಂಟೆ
ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್ ಶುರುವಾಗುವುದರಲ್ಲಿದೆ. ರಂಜಾನ್ ಗೂ ಮುನ್ನವೇ ಸೌದಿ ಅರೇಬಿಯಾದಲ್ಲಿ ಒಂಟೆಯೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಒಂಟೆಗೆ ಸಿಕ್ಕ ಬೆಲೆ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದು ಗ್ಯಾರಂಟಿ.
ಈ ಒಂಟೆಯೂ 7 ಮಿಲಿಯನ್ ಅಂದರೆ ಸುಮಾರು 14.23 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಸೌದಿ ಅರೇಬಿಯಾದಲ್ಲಿ ಈ ಒಂಟೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯ್ತು. ಒಂಟೆಯ ಆರಂಭಿಕ ಬಿಡ್ 5 ಮಿಲಿಯನ್ ಸೌದಿ ರಿಯಾಲ್ ನಲ್ಲಿ ಇರಿಸಲಾಗಿತ್ತು. ಅಂದರೆ ಸುಮಾರು 10.16 ಕೋಟಿ ರೂಪಾಯಿಗಳು. ಆದಾಗ್ಯೂ, ಅವರ ಬಿಡ್ ನ್ನು 7 ಮಿಲಿಯನ್ ಸೌದಿ ರಿಯಾಲ್ ಗಳಲ್ಲಿ ಅಂತಿಮಗೊಳಿಸಲಾಯಿತು.
ಒಂಟೆಗೆ ಸಿಕ್ಕ ಆರಂಭಿಕ ಬೆಲೆಯೇ 7 ಮಿಲಿಯನ್ ಸೌದಿ ರಿಯಾಲ್, ಅಂದ್ರೆ ಸುಮಾರು 10.16 ಕೋಟಿ ರೂಪಾಯಿ. ಹರಾಜಿನಲ್ಲಿ ಒಂಟೆಯನ್ನು ಕೊಂಡುಕೊಂಡವರು ಯಾರು ಅನ್ನೋದನ್ನು ಬಹಿರಂಗಪಡಿಸಿಲ್ಲ. ಪಾರಂಪರಿಕ ಪೋಷಾಕಿನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.
ಈ ಒಂಟೆಯ ವಿಶೇಷತೆ ಏನು?
ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ಒಂಟೆ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ.. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಯಿಂದಲೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಈದ್ ದಿನದಂದು ಒಂಟೆಗಳನ್ನು ಬಲಿ ನೀಡಲಾಗುತ್ತದೆ. ಇಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಹತ್ಯೆಗೈದ ಮಗಳು
ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
ಬಂಧನ ಭೀತಿ ಎದುರಿಸುತ್ತಿರುವ ಸಚಿವ ಸೋಮಣ್ಣ: ಮಾ.30ರಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಪ್ರಭಾಕರ್ ಭಟ್
ಟಿಪ್ಪು ಹೆಸರಿನಲ್ಲಿ ಪೂಜೆ ಮಾಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ: ಕಲ್ಲಡ್ಕ ಪ್ರಭಾಕರ್ ಭಟ್