ಯುಗಾದಿ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎಲ್ಲೆಲ್ಲಿ ಎಷ್ಟು ಬೆಲೆ ಏರಿಕೆ?
ನವದೆಹಲಿ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಸತತ 12 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ.
ಯುಗಾದಿಯ ಸಂಭ್ರದ ನಡುವೆಯೇ ಶನಿವಾರ ದೇಶದಲ್ಲಿ ಇಂಧನ ದರ(Petrol, Diesel Price )ಪ್ರತಿ ಲೀಟರ್ ಗೆ 80 ಪೈಸೆ ಹೆಚ್ಚಳವಾಗಿದೆ. ಕಳೆದ 12 ದಿನಗಳಲ್ಲಿ ಪೆಟ್ರೋಲ್ ಬೆಲೆ 7.20 ರೂಪಾಯಿ ಏರಿಕೆ ಕಂಡಿದೆ.
ಮುಂಬೈನಲ್ಲಿ, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ 117.57 ಮತ್ತು ರೂ 101 ರೂಪಾಯಿ 79 ಪೈಸೆ ಹೆಚ್ಚಾಗಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 108.21 ರೂಪಾಯಿಗಳಾಗಿದ್ದು, 76 ಪೈಸೆ ಹೆಚ್ಚಾಗಿದೆ ಮತ್ತು ಡೀಸೆಲ್ 108.21 ರೂಪಾಯಿಗಳಾಗಿದ್ದು, 76 ಪೈಸೆ ಹೆಚ್ಚಾಗಿದೆ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 112.19 ರೂಪಾಯಿಗಳಾಗಿದ್ದು, ಇಲ್ಲಿ 84 ಪೈಸೆ ಹೆಚ್ಚಾಗಿದೆ ಮತ್ತು ಡೀಸೆಲ್ ಬೆಲೆ 97.02 ರೂಪಾಯಿಗಳಾಗಿದ್ದು, 80 ಪೈಸೆ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 108 ರೂಪಾಯಿ 14 ಪೈಸೆಯಾಗಿದೆ. ಡೀಸೆಲ್ ಬೆಲೆ 92 ರೂಪಾಯಿ 05 ಪೈಸೆಯಾಗಿದೆ.
ದೇಶಾದ್ಯಂತ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೇವಲ ಇಂಧನ ಬೆಲೆ ಮಾತ್ರವಲ್ಲದೇ ದಿನಬಳಕೆಯ ವಸ್ತುಗಳ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಿರುವುದು ಜನರ ಆರ್ಥಿಕತೆಗೆ ವ್ಯತಿರಿಕ್ತ ಪರಿಣಾಮ ಉಂಟಾಗುವಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾತ್ರಿ 7ರ ನಂತರ ಕಲ್ಲಂಗಡಿ ಹಣ್ಣು ತಿನ್ನಬಾರದು; ಯಾಕೆ ಗೊತ್ತಾ?
ಎಪ್ರಿಲ್ ತಿಂಗಳು ‘ದಲಿತ ಇತಿಹಾಸ ತಿಂಗಳು’ ಎಂದು ಘೋಷಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ
ಹಿಜಾಬ್, ಹಲಾಲ್ ಬಗ್ಗೆ ಮಾತನಾಡಿದರೆ ಏನಾಗುತ್ತೋ ಅನ್ನೋದು ಬೇಡ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಹೇಳಿದ್ದೇನು?