ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಯಿತೇ? | ಆತಂಕಪಡಬೇಡಿ ಇಲ್ಲಿದೆ ಪರಿಹಾರ - Mahanayaka

ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಯಿತೇ? | ಆತಂಕಪಡಬೇಡಿ ಇಲ್ಲಿದೆ ಪರಿಹಾರ

16/10/2020

ಕಳಪೆ ಆಹಾರ ಶೈಲಿ, ಒತ್ತಡ ಜೀವನ, ರಾಸಾಯನಿಕ ವಸ್ತುಗಳ ವ್ಯಾಪಕ ಬಳಕೆ ಮೊದಲಾದ ಸಮಸ್ಯೆಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುವುದು ಸದ್ಯ ಸರ್ವೇ ಸಾಮಾನ್ಯ ಎಂಬಂತಾಗಿದೆ.

ಬಹುತೇಕರು ಕೂದಲು ಬಿಳಿ ಕಂಡಾಗ ತಮ್ಮ ಕೂದಲಿಗೆ ಹೇರ್ ಡೈ ಹಚ್ಚುತ್ತಾರೆ. ಆದರೆ ಇದು ಇತರ ಕಪ್ಪು ಕೂದಲುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇತರ ಕೂದಲುಗಳಿಗೆ ಬಿಳಿಬಣ್ಣ ಹರಡುವ ಮೂಲಕ ಮತ್ತೆ ಇನ್ನಷ್ಟು ಮುಜುಗರ ಅನುಭವಿಸುವಂತಾಗುತ್ತದೆ. ಹಾಗಾದರೆ, ಬಿಳಿ ಕೂದಲನ್ನು ಹಾಗೆ ಬಿಟ್ಟುಕೊಂಡು ಹೇಗೆ ಇರಲಿ? ಎಂದು ನೀವು ಕೇಳಬಹುದು ಅದಕ್ಕೆ ಇಲ್ಲಿದೆ ಸರಳ ಪರಿಹಾರ.

ಯಾವುದೇ ಕಾರಣಕ್ಕೂ ಕೂದಲು ಬೆಳ್ಳಗೆ ಆದಾಗ ಬಣ್ಣ ಹಚ್ಚ ಬೇಡಿ, ಬದಲಾಗಿ ಕರಿಬೇವಿನ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಬೇಕು. ಎಣ್ಣೆ ಕಪ್ಪು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು. ಬಳಿಕ ಕೂದಲುಗಳಿಗೆ ಮಸಾಜ್ ಮಾಡಬೇಕು. ಬಿಳಿ ಕೂದಲಿನ ಸಮಸ್ಯೆ ಹೆಚ್ಚಿದ್ದವರು, ದಿನಲೂ ಹಚ್ಚಿದರೂ ಪರವಾಗಿಲ್ಲ. ಮಕ್ಕಳಿಗಾದರೆ, ವಾರದಲ್ಲಿ 2-3 ಬಾರಿ ಹಚ್ಚಿದರೆ ಸಾಕು.


Provided by

ಇತ್ತೀಚಿನ ಸುದ್ದಿ