80 ಸಾವಿರ ರೂ. ಖರ್ಚು ಮಾಡಿ ಪ್ರೀತಿಯ ನಾಯಿಯ ಪ್ರತಿಮೆ ನಿರ್ಮಿಸಿದ ಯಜಮಾನ!
ಚೆನ್ನೈ: ಸಾಕು ಪ್ರಾಣಿಗಳು ಮನುಷ್ಯನನ್ನು ಎಷ್ಟು ಪ್ರೀತಿಸುತ್ತವೆ ಎಂದರೆ, ಸಾಕು ಕೂಡ ಆ ಮನೆಯ ಒಬ್ಬ ಸದಸ್ಯನಂತೆ ಬಹಳಷ್ಟು ಮನೆಗಳಲ್ಲಿ ಉಪಚರಿಸಲ್ಪಡುತ್ತದೆ. ಸಾಕು ಪ್ರಾಣಿ ಸತ್ತಾಗ ಮನೆ ಮಂದಿ ಪಡುವ ನೋವು ಅಷ್ಟಿಷ್ಟಲ್ಲ.
ಕೆಲವರು ತಮ್ಮ ಪ್ರೀತಿ ಪಾತ್ರವಾದ ನಾಯಿ, ಬೆಕ್ಕು ಸಾವನ್ನಪ್ಪಿದರೆ ಅದರ ನೋವನ್ನು ಮರೆಯಲು ವರ್ಷಾನುಗಟ್ಟಲೆ ಪ್ರಯತ್ನಿಸಿದರೂ ಸಾಕಾಗುವುದಿಲ್ಲ. ಇಂತಹದ್ದೇ ಒಂದು ಭಾವನಾತ್ಮಕ ಸನ್ನಿವೇಶ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರ ಮುತ್ತು ಎಂಬವರು ತಮ್ಮ ಸಾಕು ನಾಯಿ ಟಾಮ್ ಸಾವನ್ನಪ್ಪಿದ ಬಳಿಕ ಅದರ ನೆನಪಿಗಾಗಿ ತಮ್ಮ ತೋಟದಲ್ಲಿ ಟಾಮ್ ನ ಪ್ರತಿಮೆ ನಿರ್ಮಿಸಿದ್ದು, ತಮ್ಮ ಪ್ರೀತಿ ಪಾತ್ರನಾದ ಒಡನಾಡಿಯಾಗಿದ್ದ ಟಾಮ್ ಗೆ ವಿಶೇಷ ಗೌರವ ನೀಡಿದ್ದಾರೆ.
ಟಾಮ್ ಅತ್ಯಂಕ ನಿಷ್ಠಾವಂತನಾಗಿದ್ದ ಸುಮಾರು 11 ವರ್ಷಗಳ ಕಾಲ ಟಾಮ್ ಜೀವಿಸಿದ್ದು, ಮುತ್ತು ಅವರ ಅತ್ಯಂತ ಪ್ರೀತಿ ಪಾತ್ರವಾದ ಟಾಮ್ ಜನವರಿ 2021ರಂದು ಸಾವಿಗೀಡಾಗಿತ್ತು. ಅಂದಿನಿಂದ ಇಂದಿನ ವರೆಗೂ ಟಾಮ್ ನನ್ನು ಪ್ರತಿ ದಿನ ನೆನಪಿಸಿಕೊಳ್ಳುತ್ತಿದ್ದಾರೆ.
ಅಮೃತ ಶಿಲೆಯಲ್ಲಿ ಟಾಮ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು ಇದಕ್ಕಾಗಿ 80 ಸಾವಿರ ರೂಪಾಯಿಗಳನ್ನು ಮುತ್ತು ಅವರು ಖರ್ಚು ಮಾಡಿದ್ದಾರೆ. ಎಲ್ಲ ಶುಭದಿನಗಳಂದು ಮುತ್ತು ಅವರು ಟಾಮ್ ಗೆ ನೈವೇದ್ಯ ಅರ್ಪಿಸುತ್ತಾರೆ. ಟಾಮ್ ನ ಮೆಚ್ಚಿನ ಆಹಾರಗಳನ್ನು ಪ್ರತಿಮೆಗೆ ಅರ್ಪಿಸುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲೋಕಾರ್ಪಣೆಯಾಗಲಿದೆ ಸ್ಮಾರ್ಟ್ ಬಸ್ ಪಾಸ್: ಈ ಆ್ಯಪ್ ನ ವಿಶೇಷತೆ ಏನು?
ಮೊಸಳೆಯ ಬಾಯಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಯುವಕ!
ಬೆಳ್ತಂಗಡಿ: ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿ ಮನೆ ಸಹಿತ ಹಲವರ ಮನೆಯ ಕುಡಿಯುವ ನೀರಿನ ಸಂಪರ್ಕ ಕಡಿತ
ಕಡಿಮೆ ರೇಟ್ ನಲ್ಲಿ ಜಟ್ಕಾ ಮಾಂಸ ಮಾರಾಟ: ಬಜರಂಗದಳ ಮುಖಂಡ ತೇಜಸ್ ಗೌಡ
ಆಸ್ಕರ್ ವೇದಿಕೆಯಲ್ಲಿ ನಿರೂಪಕನಿಗೆ ಕಪಾಳ ಮೋಕ್ಷ ಮಾಡಿದ್ದ ನಟ ರಾಜೀನಾಮೆ