ಮುಂದಿನ ಮಹಾಮಾರಿ ಕೀಟಗಳಿಂದ; ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ವಿಶ್ವದ ಮುಂದಿನ ಸಾಂಕ್ರಾಮಿಕ ರೋಗವು ಸಿಫಿಲಿಸ್ ಮತ್ತು ಡೆಂಗ್ಯೂನಂತಹ ಕೀಟಗಳಿಂದ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ. ಡೆಂಗ್ಯೂ, ಹಳದಿ ಜ್ವರ, ಚಿಕೂನ್‌ಗುನ್ಯಾ ಮತ್ತು ಸಿಕಾ ವೈರಸ್ ಗಳನ್ನು ಆರ್ತ್ರೋಪಾಡ್-ಬೋನ್ ವೈರಸ್‌ಗಳು ಅಥವಾ ಆರ್ಬೋವೈರಸ್ ಗಳು ಎಂದು ಕರೆಯಲಾಗುವುದು. ಸೊಳ್ಳೆಗಳು, ಕೆಲವು ರೀತಿಯ ಕೀಟಗಳು, ಪರೋಪಜೀವಿಗಳು ಮತ್ತು ಚಿಗಟಗಳಂತಹ ರಕ್ತ ಹೀರುವ ಆರ್ತ್ರೋಪಾಡ್‌ಗಳಿಂದ ರೋಗ ಹರಡುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಪ್ರತಿ ವರ್ಷ 130 ದೇಶಗಳಲ್ಲಿ ಸುಮಾರು 39 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. 2016 ರಲ್ಲಿ, ಸಿಕಾ ವೈರಸ್ ಏಕಾಏಕಿ ಕನಿಷ್ಠ 89 ದೇಶಗಳಲ್ಲಿ ವರದಿಯಾಗಿದೆ.
ಸಿಕಾ ವೈರಸ್ ಒಂದು ಮಾರಣಾಂತಿಕ ವೈರಸ್ ಆಗಿದ್ದು ಅದು ಗರ್ಭಾವಸ್ಥ ಶಿಶುಗಳಿಗೂ ಸೋಂಕು ತಗಲುತ್ತದೆ. 40 ಕ್ಕೂ ಹೆಚ್ಚು ದೇಶಗಳಲ್ಲಿ ಸವಾಲಾಗಿರುವ ಹಳದಿ ಜ್ವರ {ಜಾಂಡೀಸ್}, ಹೆಮರಾಜಿಕ್ ಜ್ವರ ಮತ್ತು ಸಾವಿಗೆ ಕಾರಣವಾಗುತ್ತದೆ. 115 ದೇಶಗಳಲ್ಲಿ ಕಂಡುಬರುವ ಚಿಕೂನ್‌ಗುನ್ಯಾ ತೀವ್ರವಾದ ಸಂಧಿವಾತ ಮತ್ತು ಸಂಧಿನೋವು ಉಂಟುಮಾಡುವ ಕಾಯಿಲೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ರೋಗಗಳ ಅಪಾಯವು ಹೆಚ್ಚಾಗಿದ್ದು ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಆರೋಗ್ಯ ಏಜೆನ್ಸಿಗಳು ಇದನ್ನು ಸಾಂಕ್ರಾಮಿಕ ರೋಗವಾಗದಂತೆ ತಡೆಯಲು ಒಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಕ್ರಾಮಿಕ ಅಪಾಯದ ಸನ್ನದ್ಧತೆ ತಂಡದ ನಿರ್ದೇಶಕ, ಡಾ. ಸಿಲ್ವಿ ಬ್ರ್ಯಾಂಟ್ ಇದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ತಮಿಳುನಾಡು ಸರ್ಕಾರ
ರಾಜಕೀಯ ಅಸ್ಥಿರತೆ; ಶ್ರೀಲಂಕಾ ಪ್ರಧಾನಿ ರಾಜೀನಾಮೆ
ಬನ್ನಂಜೆ ರಾಜ ಸಹಿತ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋಕಾ ನ್ಯಾಯಾಲಯ
ರಂಝಾನ್ ಉಪವಾಸದ ಸಂದರ್ಭದಲ್ಲಿ ಮುಸಲ್ಮಾನರು ಖರ್ಜೂರ ಸೇವಿಸುವುದು ಯಾಕೆ ಗೊತ್ತಾ?
ರಷ್ಯಾದ ಗುಂಡಿನ ದಾಳಿಯಲ್ಲಿ ಉಕ್ರೇನಿಯನ್ ಫೋಟೋ ಜರ್ನಲಿಸ್ಟ್ ಸಾವು