ಗೋರಾಖ್ ನಾಥ್ ಮಠಕ್ಕೆ ನುಗ್ಗಿ ಮಚ್ಚಿನಿಂದ ದಾಳಿ ನಡೆಸಿದ ಮಾನಸಿಕ ಅಸ್ವಸ್ಥ
ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಗೋರಖ್ ನಾಥ್ ಮಠಕ್ಕೆ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಮಠಕ್ಕೆ ನುಗ್ಗಲು ಯತ್ನಿಸಿದ್ದು ಈತನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಿನ್ನೆ ಸಂಜೆ ನಡೆದಿದೆ.
ಅಹ್ಮದ್ ಮುರ್ತಾಜ್ ಎಂಬಾತ ಈ ಕೃತ್ಯ ನಡೆಸಿದವನು ಎಂದು ಹೇಳಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ‘ಅಲ್ಲಾ ಹೂ ಅಕ್ಬರ್’ ಎಂದು ಕೂಗುತ್ತ ಮಂದಿರಕ್ಕೆ ನುಗ್ಗಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಇನ್ನೂ ಘಟನೆಯ ವೇಳೆ ಆತನನ್ನ ತಡೆಯಲು ಮುಂದಾದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಕೊನೆಗೂ ಬಿಡದ ಭದ್ರತಾ ಸಿಬ್ಬಂದಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಬಳಿಯಿದ್ದ ರೈಫಲ್ ಕಸಿದುಕೊಳ್ಳಲು ಈತ ಯತ್ನಿಸಿದ್ದಾನೆ. ಈತನ ಬಳಿಯಿದ್ದ ಧಾರ್ಮಿಕ ಪುಸ್ತಕವನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.ಇನ್ನೂ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು, ಹೀಗಾಗಿ ಇಂತಹ ವರ್ತನೆ ತೋರಿದ್ದಾನೆ ಎಂದು ಹೇಳಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯೋಗಿ ಸರ್ಕಾರ, ತನಿಖೆಯನ್ನು ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಗೆ ಒಪ್ಪಿಸಿದ್ದು ಎನ್ ಐ ಎ ಹಾಗೂ ಇಂಟೆಲಿಜೆನ್ಸ್ ಬ್ಯೂರೋ ಕೂಡ ತನಿಖೆಗೆ ಕೈ ಜೋಡಿಸುತ್ತಿದೆ.ಇಂದು ಸಂಜೆ 4 ಗಂಟೆ ಸುಮಾರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮುಂದಿನ ಮಹಾಮಾರಿ ಕೀಟಗಳಿಂದ; ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ತಮಿಳುನಾಡು ಸರ್ಕಾರ
ರಾಜಕೀಯ ಅಸ್ಥಿರತೆ; ಶ್ರೀಲಂಕಾ ಪ್ರಧಾನಿ ರಾಜೀನಾಮೆ
ಮತ್ತೆ ಪೆಟ್ರೋಲ್ ಡಿಸೇಲ್ ಬೆಲೆಯೆರಿಕೆ
ರಂಝಾನ್ ಉಪವಾಸದ ಸಂದರ್ಭದಲ್ಲಿ ಮುಸಲ್ಮಾನರು ಖರ್ಜೂರ ಸೇವಿಸುವುದು ಯಾಕೆ ಗೊತ್ತಾ?