ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ - Mahanayaka
9:24 AM Thursday 12 - December 2024

ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ: ಐವರಿಗೆ ಗಾಯ, ಮಹಿಳೆಯ ಸ್ಥಿತಿ ಗಂಭೀರ

honey bee attack
05/04/2022

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ(SSLC) ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಹೆಜ್ಜೇನು ದಾಳಿ(Honey bee attack) ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಸೇಂಟ್ ಮೈಕಲ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿ ಇಮಾಮ್ ಜಾಫರ್ ಸಾಧಿಕ್, ಶಾಲೆ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಮಹಿಳಾ ಕಾನ್ ಸ್ಟೆಬಲ್ ವಾಣಿ ಅಜಯ್ ದ್ಯಾವನೂರ, ವಿದ್ಯಾರ್ಥಿನಿ ತಾಯಿ ಭುವನೇಶ್ವರಿ ಕೆ., ಶಾಲೆ ಸಿಬ್ಬಂದಿ ಪ್ರಕಾಶ ಬಲರಾಮ ಮತ್ತು ಸುನೀತಾ ಜೋಸೆಫ್ ಗಾಯಗೊಂಡವರು ಎನ್ನಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಭುವನೇಶ್ವರಿ ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.  ಉಳಿದವರು ಪ್ರಥಮ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

ನಾಲ್ಕು ಅಂತಸ್ತಿನ ಶಾಲಾ ಕಟ್ಟಡದಲ್ಲಿ ಹೆಜ್ಜೇನು ಗೂಡು ಕಟ್ಟಿತ್ತು. ಸಾಕಷ್ಟು ಸಂಖ್ಯೆ ವಿದ್ಯಾರ್ಥಿಗಳು ಕೊಠಡಿಯೊಳಗೆ ತೆರಳಿದ ಬಳಿಕ ಹೆಜ್ಜೇನು ದಾಳಿ ನಡೆಸಿದೆ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಚ್ಚರ: ನಿದ್ದೆ ಕೆಟ್ಟರೆ ನೀವು ಈ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾದೀತು!

ಗಾಂಜಾ ವ್ಯಸನಿ 15 ವರ್ಷ ಮಗನ ಚಟ ಬಿಡಿಸಲು ಮುಖಕ್ಕೆ ಖಾರದ ಪುಡಿ ಎರಚಿದ ತಾಯಿ!

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಶಾಕ್ ನೀಡಿದ ವಿದ್ಯುತ್ ಬೆಲೆ ಏರಿಕೆ!

ಮಸೀದಿ ಧ್ವನಿ ವರ್ಧಕ ತೆರವಿಗೆ ಆಗ್ರಹ: ಸಚಿವ ಈಶ್ವರಪ್ಪ, ಕುಮಾರಸ್ವಾಮಿ ಏನು ಹೇಳಿದರು?

ರಂಝಾನ್ ಉಪವಾಸದ ಸಂದರ್ಭದಲ್ಲಿ ಮುಸಲ್ಮಾನರು ಖರ್ಜೂರ ಸೇವಿಸುವುದು ಯಾಕೆ ಗೊತ್ತಾ?

ಇತ್ತೀಚಿನ ಸುದ್ದಿ