ಮುಸ್ಲಿಮ್ ಮಹಿಳೆಯರ ಅತ್ಯಾಚಾರಕ್ಕೆ ಕರೆ ನೀಡಿದ ಸ್ವಾಮೀಜಿ - Mahanayaka
10:51 PM Wednesday 11 - December 2024

ಮುಸ್ಲಿಮ್ ಮಹಿಳೆಯರ ಅತ್ಯಾಚಾರಕ್ಕೆ ಕರೆ ನೀಡಿದ ಸ್ವಾಮೀಜಿ

up swamy
08/04/2022

ಸೀತಾಪುರ:  ಇತ್ತೀಚೆಗೆ ಕಡಿಯಿರಿ, ಕೊಲ್ಲಿರಿ ಎಂದು ಹೇಳಿಕೆ ನೀಡುತ್ತಿರುವ ನಕಲಿ ಸ್ವಾಮೀಜಿಗಳ ನಡುವೆ ಇಲ್ಲೊಬ್ಬ ಸ್ವಾಮೀಜಿ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರ ನಡೆಸಲು ಹಿಂದೂ ಯುವಕರಿಗೆ ಕರೆ ನೀಡಿದ ಆತಂಕಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ. ದೂರದಲ್ಲಿರುವ ಸೀತಾಪುರ ಜಿಲ್ಲೆಯಲ್ಲಿ ನಡೆದಿದ್ದು, ವಿಡಿಯೋದಲ್ಲಿ ಮುಸ್ಲಿಮ್ ಹೆಂಗಸರನ್ನು ಅಪಹರಿಸಿ ಅತ್ಯಾಚಾರ ಮಾಡಿ ಎಂದು ಹಿಂದೂ ಯುವಕರಿಗೆ ಸ್ವಾಮೀಜಿ ಕರೆ ನೀಡಿರುವ ದೃಶ್ಯ ಸೆರೆಯಾಗಿದೆ.

ಖೈರಾಬಾದ್ ಪಟ್ಟಣದಲ್ಲಿ ಜೀಪಿನಲ್ಲಿ ಕುಳಿತಿದ್ದ ಖಾವಿಧಾರಿ ಸ್ವಾಮೀಜಿ ಈ ರೀತಿಯ ಹೇಳಿಕೆ ನೀಡಿದ್ದಾನೆ. ಈತ ಹೇಳಿಕೆ ನೀಡುತ್ತಿದ್ದಂತೆಯೇ ಅಲ್ಲಿದ್ದವರು ಜೈಶ್ರೀರಾಮ್ ಎಂದು ಘೋಷಣೆ ಕೂಗಿ ಸಮ್ಮತಿ ವ್ಯಕ್ತಪಡಿಸಿರುವುದು ಕೂಡ ಕಂಡು ಬಂದಿದೆ.

ಈ ಪ್ರದೇಶದಲ್ಲಿ ಯಾವುದೇ ಹಿಂದೂ ಯುವತಿಗೆ ಮುಸ್ಲಿಮರು ಕಿರುಕುಳ ನೀಡಿದರೆ, ಮುಸ್ಲಿಮ್ ಮಹಿಳೆಯರನ್ನು ಅಪಹರಿಸಿ ಸಾರ್ವಜನಿಕವಾಗಿ ಅತ್ಯಾಚಾರ ನಡೆಸಬೇಕು ಎಂದು ಪ್ರಚೋದನಾಕಾರಿ ಹೇಳಿಕೆಯನ್ನು ಕಿರಿಗೇಡಿ ಸ್ವಾಮೀಜಿ ನೀಡುತ್ತಿರುವುದು ಕಂಡು ಬಂದಿದೆ.

ಈ ವಿಡಿಯೋವನ್ನು ಮಹಮ್ಮದ್ ಜಾಬೀರ್ ಎಂಬವರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸೀತಾಪುರ ಪೊಲೀಸರು,  ಈ ಘಟನೆಯ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಿಂದ ತನಿಖೆ ನಡೆಯುತ್ತಿದೆ.  ಸಾಕ್ಷ್ಯಾಧಾರಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ  ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್, ಹಲಾಲ್, ಮೈಕ್, ಮಾವು ಬಳಿಕ ಮತ್ತೊಂದು ವಿವಾದ

ಶಾರುಖ್ ಮತ್ತು ಪ್ರಿಯಾಂಕಾಗಿಂತ, ನಾನೇ ಸೂಪರ್ ಹೋಸ್ಟ್: ತನ್ನನ್ನು ತಾನೇ ಹೊಗಳಿಕೊಂಡ ಕಂಗನಾ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ

‘ನಮ್ಮ ಭೂಮಿ ನಮ್ಮ ಆರೋಗ್ಯ’; ಇಂದು ವಿಶ್ವ ಆರೋಗ್ಯ ದಿನ

ರಹೀಂ ಉಚ್ಚಿಲ್ ಗೆ ಸದ್ದಿಲ್ಲದೇ ಶಾಕ್ ನೀಡಿದ ರಾಜ್ಯ ಸರ್ಕಾರ

 

 

ಇತ್ತೀಚಿನ ಸುದ್ದಿ