ರೈಲು ಹಳಿಯ ಬಳಿ ನಿಂತು ಸೆಲ್ಫಿ: ಮೂವರು ಯುವಕರ ದಾರುಣ ಸಾವು - Mahanayaka
11:10 PM Wednesday 11 - December 2024

ರೈಲು ಹಳಿಯ ಬಳಿ ನಿಂತು ಸೆಲ್ಫಿ: ಮೂವರು ಯುವಕರ ದಾರುಣ ಸಾವು

death
08/04/2022

ಚೆನ್ನೈ: ರೈಲ್ವೆ ಹಳಿ ಬಳಿ ವಿಡಿಯೊ ಮಾಡುತ್ತಿದ್ದ ಯುವಕರ  ಮೇಲೆ ರೈಲು ಹರಿದ ಪರಿಣಾಮ ಮೂವರು ಯುವಕರು  ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ ಅಶೋಕ್ ಕುಮಾರ್, ಪ್ರಕಾಶ್ ಮತ್ತು ಮೋಹನ್ ಎಂಬುವರು ಮೃತ ವಿದ್ಯಾರ್ಥಿಗಳು. ಇವರು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಿದ್ದರು ಎನ್ನಲಾಗಿದೆ.

ಮಾರ್ಚ್ 7ರ ಸಂಜೆ ಮೂವರು ರೈಲು ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ಚೆನ್ನೈನಿಂದ ಚೆಂಗಲ್ಪಟ್ಟಿಗೆ ಬರುತ್ತಿದ್ದ ರೈಲು ಯುವಕರಿಗೆ  ಡಿಕ್ಕಿ ಹೊಡೆದಿದ್ದು ಇದರ ಮೂವರು ಯುವಕರ ಮೃತದೇಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚೆಂಗಲ್ಪಟ್ಟು ರೈಲ್ವೆ ಪೊಲೀಸರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ರೈಲು ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ ರಷ್ಯಾ: 30 ಜನರ ದುರ್ಮರಣ

ಮಂಗಳೂರು: ನಡು ರಸ್ತೆಯಲ್ಲಿ ಬೆಂಕಿ ಹತ್ತಿಕೊಂಡು ಉರಿದ ಬಸ್

ಮುಸ್ಲಿಮ್ ಮಹಿಳೆಯರ ಅತ್ಯಾಚಾರಕ್ಕೆ ಕರೆ ನೀಡಿದ ಸ್ವಾಮೀಜಿ

ಶಾರುಖ್ ಮತ್ತು ಪ್ರಿಯಾಂಕಾಗಿಂತ, ನಾನೇ ಸೂಪರ್ ಹೋಸ್ಟ್: ತನ್ನನ್ನು ತಾನೇ ಹೊಗಳಿಕೊಂಡ ಕಂಗನಾ

ಕುವೈತ್ ನಲ್ಲಿ ವಿಜಯ್ ನಟನೆಯ ಬೀಸ್ಟ್ ಚಿತ್ರಕ್ಕೆ ನಿಷೇಧ: ಕಾರಣ ಏನು ಗೊತ್ತಾ?

 

ಇತ್ತೀಚಿನ ಸುದ್ದಿ