ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ - Mahanayaka
5:01 PM Wednesday 11 - December 2024

ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ

eshwarappa
09/04/2022

ಬೆಂಗಳೂರು: ಅಪ್ಪ- ಅಮ್ಮ ಸುಂದರ ಹುಡುಗಿಯನ್ನು ನೋಡಿ ಮದುವೆ ಮಾಡ್ತಾರೆ. ಮಗ ಸರಿಯಾಗಿ  ಬಳಸಿಕೊಳ್ಳದಿದ್ದರೆ ಅದು ಅವನದ್ದೇ ತಪ್ಪು ಹೊರತು, ಅಪ್ಪ ಅಮ್ಮ ಹೇಗೆ ಹೊಣೆಗಾರರಾಗುತ್ತಾರೆ? ಎಂದು ಶೌಚಗೃಹ ಬಳಕೆ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ,  ಸ್ವಚ್ಛ ಭಾರತ ಮಿಷನ್ ನಡಿ ರಾಜ್ಯದಲ್ಲಿ 12.62 ಲಕ್ಷ ವೈಯಕ್ತಿಕ ಶೌಚಗೃಹ ನಿರ್ಮಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಶೌಚಾಲಯ ಬಳಕೆಯಾಗದಿರುವ ವಿಚಾರದ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಶೌಚಾಲಯ ಬಳಕೆಯ ಬಗ್ಗೆ ನಿಖರವಾಗಿ ಉತ್ತರ ಕೊಡುವುದು ಕಷ್ಟ.ಬಳಕೆ ಮಾಡದೇ ಬಯಲು ಶೌಚಾಲಯ ಬಳಕೆ ಮಾಡಿದರೆ ಹೇಗೆ?  ಎಂದ ಈಶ್ವರಪ್ಪ, ಸುಂದರ ಸೊಸೆ ಮತ್ತು ಮಗನ ಉದಾಹರಣೆ ನೀಡಿ, ಉತ್ತರಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ನಿಮ್ಮನೆ ಹೆಣ್ಮಕ್ಕಳು ಬೀದಿಗೆ ಬಂದರೆ ಸರಿಯೇ ? ಹೆಣ್ಮಕ್ಕಳು ಚೊಂಬು ಹಿಡಿದುಕೊಂಡು ಬೀದಿಗೆ ಹೋಗುತ್ತಾ ಇಲ್ವಾ..? ಹೆಣ್ಮಕ್ಕಳು ಜತೆಗೆ ಕುಳಿತುಕೊಳ್ಳಬೇಕು. ಪ್ರಪಂಚದ್ದು, ಮನೆಯದ್ದು, ಅಕ್ಕಪಕ್ಕದ ಮನೆಯ ಹೆಣ್ಮಕ್ಕಳ ವಿಚಾರ ಚರ್ಚೆ ಮಾಡಬೇಕು, ಅದರಲ್ಲೇ ಅವರಿಗೆ ಆನಂದ. ಪರಿಸ್ಥಿತಿ ಬದಲಾವಣೆ ಆಗಬೇಕು ಎಂದು ಈಶ್ವರಪ್ಪ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಲ್ಲರೂ ಹಿಂದಿಯಲ್ಲಿ ಮಾತನಾಡಬೇಕೆಂದ ಅಮಿತ್ ಶಾ!

ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು  | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?

ಶಾಲೆಯ ಬಳಿ ಗುಂಡಿನ ದಾಳಿ: ಓರ್ವ ವಿದ್ಯಾರ್ಥಿ ಸಾವು

ಯೋಗಿ ಆದಿತ್ಯನಾಥ್ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಕಾರ್ಟೂನ್! | ರಾತ್ರೋ ರಾತ್ರಿ ನಡೆದದ್ದೇನು?

ಎಟಿಎಂನಿಂದ ಹಣ ಡ್ರಾ ಮಾಡಬೇಕಾದರೆ ಕಾರ್ಡ್ ಬೇಕಾಗಿಲ್ಲ!: ಏನಿದು ಕಾರ್ಡ್ ಲೆಸ್ ಕ್ಯಾಶ್?

ಇತ್ತೀಚಿನ ಸುದ್ದಿ