ಮಂಗಳೂರು: ಮೀನುಗಾರಿಕಾ ಬೋಟ್ ಮಗುಚಿ, 6 ಮೀನುಗಾರರು ನಾಪತ್ತೆ
01/12/2020
ಮಂಗಳೂರು: ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಆಳ ಸಮುದ್ರದಲ್ಲಿ ಮಗುಚಿದ್ದು, ದೋಣಿಯಲ್ಲಿದ್ದ 6 ಮೀನುಗಾರರು ನಾಪತ್ತೆಯಾಗಿದ್ದಾರೆ.
ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ರಾತ್ರಿ ವಾಪಸ್ ಬರುವ ಸಂದರ್ಭದಲ್ಲಿ ಉಳ್ಳಾಲದ ಪಶ್ಚಿಮ ಭಾಗದ ನಾಟೆಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ.
14 ಮಂದಿ ದಡ ಸೇರಿದ್ದಾರೆ. 6 ಮಂದಿ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಇತರ ಮೀನುಗಾರರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಅಧಿಕ ಮೀನಿನ ಸಂಗ್ರಹ ಅಥವಾ ವೇಗವಾದ ಗಾಳಿ ಬೀಸಿದ ಪರಿಣಾಮ ಬೋಟ್ ಮಗುಚಿದೆ ಎಂದು ಹೇಳಲಾಗಿದೆ.