ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ! - Mahanayaka
5:30 PM Wednesday 5 - February 2025

ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

odisha
11/04/2022

ಒಡಿಶಾ: ಒಟ್ಟಿಗೆ ಕಾಡಿಗೆ ತೆರಳಿದ್ದ ಮೂವರು ಯುವತಿಯರು ಶವವಾಗಿ ಪತ್ತೆಯಾದ ಘಟನೆ ಒಡಿಶಾದ ನವರಂಗಪುರದಲ್ಲಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಿನ್ನೆ ಸಂಜೆ 4:30ರ  ವೇಳೆಗೆ ಮೂವರು ಯುವತಿಯರು ಒಟ್ಟಿಗೆ ಕಾಡಿಗೆ ತೆರಳುತ್ತಿರುವುದನ್ನು ಸ್ಥಳಿಯರು ನೋಡಿದ್ದರು. ಆದರೆ, ಯಾರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಆದರೆ, ರಾತ್ರಿ ವೇಳೆಗೆ ಇವರ ಮೃತದೇಹ ಕಾಡಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತೊಹಾರಾ ಎಂಬ ಹಳ್ಳಿಯ ನಿವಾಸಿಗಳಾದ ಹೇಮಲತಾ ಗೌಡಾ(21) ಕೌಸಲ್ಯಾ ಮಜ್ಹಿ(17) ಮತ್ತು ಫುಲಮತಿ ಮಜ್ಹಿ(16) ಮೃತಪಟ್ಟವರು ಎಂದು ಹೇಳಲಾಗಿದೆ.  ಶನಿವಾರ ಸಂಜೆ ಕಾಡಿಗೆ ತೆರಳಿದ್ದ ಯುವತಿಯರು ರಾತ್ರಿ 9:30 ಆದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಅವರನ್ನು ಕುಟುಂಬಸ್ಥರು ಹುಡುಕುತ್ತಾ ತೆರಳಿದ್ದಾರೆ. ಈ ವೇಳೆ ಒಂದೇ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.

ಇನ್ನೂ ಯುವತಿಯರ ಸಾವು ಆತ್ಮಹತ್ಯೆಯೋ ಕೊಲೆಯೋ ಎನ್ನುವುದು ತಿಳಿದು ಬಂದಿಲ್ಲ. ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೃತರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಕೂಡ ಸೇರಿದ್ದಾರೆ ಆದರೆ, ಸ್ಥಳೀಯ ಆಡಳಿತ, ಮೃತಪಟ್ಟವರೆಲ್ಲರೂ, ವಯಸ್ಕರು 18 ವರ್ಷ ಮೇಲ್ಪಟ್ಟವರು ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!

ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಕಾರ್ಖಾನೆಯಲ್ಲಿ ಸ್ಫೋಟ:  6 ಮಂದಿಯ ದಾರುಣ ಸಾವು

ರೋಪ್ ವೇ ಕೇಬಲ್ ಕಾರುಗಳ ಡಿಕ್ಕಿ: ರೋಪ್ ವೇಯಲ್ಲಿ ಸಿಲುಕಿದ 50ಕ್ಕೂ ಅಧಿಕ ಜನ

ಮಹಾತ್ಮ ಜ್ಯೋತಿಬಾ ಫುಲೆ ಎಂಬ ಸತ್ಯಶೋಧಕ | ಬಾಲಾಜಿ ಎಂ. ಕಾಂಬಳೆ

 

ಇತ್ತೀಚಿನ ಸುದ್ದಿ