ಸಿಆರ್‌ ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಕಾರ್ಯಾಚರಣೆ: ಮೂವರು ಉಗ್ರರ ಬಂಧನ - Mahanayaka
12:16 AM Thursday 12 - December 2024

ಸಿಆರ್‌ ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಕಾರ್ಯಾಚರಣೆ: ಮೂವರು ಉಗ್ರರ ಬಂಧನ

jammukashmir
12/04/2022

ಜಮ್ಮು&ಕಾಶ್ಮೀರ್: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ ಉಗ್ರರರ ವಿರುದ್ಧದ ಕಾರ್ಯಾಚರಣೆ ಇತ್ತೀಚಿಗೆ ತೀರ್ವವಾಗುತ್ತಿದ್ದು, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ ನ ವಡೋರಾ ಬಾಲಾ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಥಿಯೋಫಿಲ್ ಮಜೀದ್, ಓವೈಸ್ ಅಹ್ಮದ್ ಮಿರ್ ಮತ್ತು ಶಬ್ಬೀರ್ ಅಹ್ಮದ್ ಉಗ್ರರನ್ನು ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟಿದೆ. ಈ ಮೂವರೂ ಉಗ್ರರು ಬ್ರೆಟ್ ಕ್ಲಾನ್ ಸೋಪೋರ್​ ಪ್ರದೇಶಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಉಗ್ರರು ಲಷ್ಕರ್​ ಎ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ತಿಳಿದಬಂದಿದೆ. ಬಂಧಿತ ಉಗ್ರರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು,  ಈ ಕುರಿತು ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ಸೋಮವಾರ ಸಂಜೆಯಷ್ಟೇ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕೋರಲ್ ಮಂಜ್‌ಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಘರ್ಷಣೆ ನಡೆದು, ಇಬ್ಬರು ಉಗ್ರರು ಭದ್ರತಾ ಪಡೆಗಳ ಗುಂಡೇಟಿಗೆ ಹತರಾಗಿದ್ದರು. ಈ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ ಎಂದು ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೇಬಲ್ ಕಾರ್ ಡಿಕ್ಕಿ ಪ್ರಕರಣ: ಮೂವರು ಪ್ರವಾಸಿಗಳ ದಾರುಣ ಸಾವು

ಮತ್ತೊಂದು ಎಲೆಕ್ಟ್ರಿಕ್ ಬೈಕ್ ದುರಂತ: ಕಂಟೈನರ್ ನೊಳಗಿದ್ದ 20 ಬೈಕ್ ಗಳು ಸುಟ್ಟು ಭಸ್ಮ

ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವ ಗಳಿಂದಲೇ ಚಾಲನೆ

ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!

 

 

ಇತ್ತೀಚಿನ ಸುದ್ದಿ